ಕ್ರೈಂವೈರಲ್ ನ್ಯೂಸ್

ಆದಷ್ಟು ಬೇಗ ಅತ್ತೆಯ ಉಸಿರು ನಿಲ್ಲಲಿ ಎಂದು 50 ರೂಪಾಯಿ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿದ ಸೊಸೆ..! ಸೊಸೆ ಬರೆದ ವಿಚಿತ್ರ ಸಾಲುಗಳು ಈಗ ವೈರಲ್

165

ನ್ಯೂಸ್ ನಾಟೌಟ್: ಪ್ರತಿ ಮನೆಯಲ್ಲೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಅತ್ತೆ-ಸೊಸೆ ಕಾದಾಟ ನಡೆಯುತ್ತಲೇ ಇರುತ್ತದೆ. ಕೆಲವು ಸಲ ಅದು ವಿಕೋಪಕ್ಕೂ ತಿರುಗುವುದುಂಟು. ಅದೆಲ್ಲವನ್ನು ಮೀರಿ ಇಲ್ಲೊಬ್ಬಳು ಸೊಸೆ ಅತ್ತೆಯ ಮೇಲಿನ ಸಿಟ್ಟಿನಿಂದ 50 ರೂಪಾಯಿ ನೋಟು ತೆಗೆದುಕೊಂಡು ಅದರಲ್ಲಿ ಅತ್ತೆಯ ಮೇಲಿನ ಸಿಟ್ಟು ತೋರಿಸಿದ್ದಾಳೆ. ಈಕೆಯ ಕೆಲಸ ಇದೀಗ ವೈರಲ್ ಆಗುತ್ತಿದೆ.

ಅತ್ತೆಗೆ ಒಳ್ಳೆಯದಾಗಲಿ ಎಂದು ಕೆಲವು ಸೊಸೆಯರು ದೇವರಲ್ಲಿ ಕೇಳಿಕೊಂಡಿದ್ದರೆ ಇಲ್ಲೊಬ್ಬಳು ಸೊಸೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ದೇವರಿಗೆ ಹರಕೆ ನೀಡಿದ್ದಾಳೆ. ಅಂದಹಾಗೆಯೇ ಇದು ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವರಲ್ಲಿ ಬೇಡಿಕೊಂಡಿರುವ ಪರಿ. ಈ ವಿಚಿತ್ರವನ್ನು ಕಂಡು ಇದೀಗ ಎಲ್ಲರು ಕೂಡ ಬೆರಗಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವರ ಗುಂಡಿಯಲ್ಲಿ ಕಾಣಿಕೆ ಹಾಕಿರುವ 50 ರೂಪಾಯಿ ಮುಖ ಬೆಲೆಯ ನೋಟ್ ನಲ್ಲಿ ಇಂತಹದ್ದೊಂದು ಬರಹ ಪತ್ತೆಯಾಗಿದೆ.

ನೋಟಿನ ಮೇಲೆ ನಮ್ಮ ಅತ್ತೆ ಬೇಗ ಸಾ * ಯಬೇಕು ಸ್ವಾಮಿ ಅನ್ನೋದನ್ನ ಬರೆಯಲಾಗಿದೆ. ಇದನ್ನು ಕಂಡು ಕೆಲವರು ಇದೆಂಥ ಕಾಲವಯ್ಯ ಎಂದು ಅಚ್ಚರಿಗೊಂಡಿದ್ದಾರೆ. ಇತ್ತೀಚೆಗೆ ದತ್ತನ ಹುಂಡಿ ಎಣಿಕೆ ಸಂದರ್ಭದಲ್ಲಿ ವಿಚಿತ್ರವಾಗಿ ಬರೆದಿರುವ 50 ರೂಪಾಯಿ ನೋಟ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ನೋಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

See also  ಟೈಟಾನಿಕ್ ಸಬ್‌ಮೆರಿನ್ ದುರಂತ! ಅವಶೇಷಗಳನ್ನು ತೀರಕ್ಕೆ ಎಳೆದು ತಂದ ರಕ್ಷಣಾ ತಂಡ! ಫೋಟೋ ಬಿಡುಗಡೆಗೊಳಿಸಿದ ಅಸೋಸಿಯೇಟೆಡ್ ಪ್ರೆಸ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget