Uncategorized

ಸಮಾಜ ಹಾಳು ಮಾಡುತ್ತಿರುವ RSS ಮೇಲೂ ಕ್ರಮ ತೆಗೊಳ್ಳಿ: ಸಿದ್ದರಾಮಯ್ಯ

ನ್ಯೂಸ್ ನಾಟೌಟ್:  ‘ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ. ಯಾವುದೇ ಸಂಘಟನೆಯಾದರೂ ನಿಷೇಧಿಸಬೇಕು. ಆರೆಸ್ಸೆಸ್‌ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಯಾರು ಸಮಾಜದಲ್ಲಿ ಕಂಟಕ ಮಾಡುತ್ತಾರೊ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ನಮ್ಮ‌ ಅಭ್ಯಂತರವಿಲ್ಲ. ಶಾಂತಿ ಹಾಳು ಮಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಲಿ. ನಾನು ಆಗಲೂ ಹೇಳುತ್ತಿದ್ದೆ. ಈಗಲೂ ಹೇಳುತ್ತಿದ್ದೇನೆ. ದ್ವೇಷದ ರಾಜಕಾರಣ ಮಾಡಿದರೆ ಕ್ರಮ ಜರುಗಿಸಲಿ’ ಎಂದರು. ‘ನುಡಿದಂತೆ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದೇವೆ’ ಎಂಬ ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ‘ಪಿಎಫ್ಐ ಜೊತೆಗೆ ಒಂದೇ ನಾಣ್ಯದ ಇನ್ನೊಂದು ಮುಖ ಆಗಿರುವ ಆರೆಸ್ಸೆಸ್‌ ವಿರುದ್ಧ ಬಿಜೆಪಿ ಯಾವಾಗ ಕ್ರಮಕೈಗೊಳುತ್ತದೆ?  ಎಲ್ಲ ರೀತಿಯ ಕೋಮುವಾದ ಮತ್ತು ದ್ವೇಷ ಸಮಾಜದ ರಚನೆ ಹಾನಿಕಾರಕ. ಅದನ್ನು ನಿಗ್ರಹಿಸುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದ್ದಾರೆ.

Related posts

7 ತಿಂಗಳ ಗರ್ಭಿಣಿಗೆ ಗುದ್ದಿದ ಲಾರಿ..! ಪತಿಯ ಕಣ್ಣೆದುರೇ ಸಾವನ್ನಪ್ಪಿದ ಪತ್ನಿ..!

ಕಾಡಾನೆ ಹಾವಳಿಗೆ ರೈತರು ಸುಸ್ತು,ಕಟ್ಟಿಹಾಕಿದ್ದ ಹಸುವನ್ನೇ ಕೊಂ*ದು ಹಾಕಿದ ಸಲಗ!

ಈಶ್ವರಪ್ಪ ನಂತರ ಉರುಳುತ್ತೆ ಇನ್ನೂ 1 ವಿಕೆಟ್‌..!