ಕ್ರೈಂಬೆಂಗಳೂರುವೈರಲ್ ನ್ಯೂಸ್

ವಿದ್ಯಾರ್ಥಿನಿ ಆತ್ಮಹತ್ಯೆಯ ರಹಸ್ಯ ಬಯಲು..! ಈ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು..?

270

ನ್ಯೂಸ್ ನಾಟೌಟ್: ಹೊಸ ವರ್ಷದಂದೇ ಬೆಂಗಳೂರಿನ ಸುಧಾಮನಗರದಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಫೋಟೋಶೂಟ್‍ಗೆ ಬಿಡದಿದ್ದಕ್ಕೆ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಫೋಟೋ ಶೂಟ್‍ಗೆ ತೆರಳಲು ಸಜ್ಜಾಗಿದ್ದಳು. ಈ ಫೋಟೋ ಶೂಟ್‍ಗೆ ಹೋಗೋದು ಬೇಡ ಎಂದು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೇಂದ್ರ ಡಿಸಿಪಿ ಶೇಖರ್ ಪ್ರತಿಕ್ರಿಯಿಸಿದ್ದಾರೆ.

ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ 21 ವರ್ಷದ ವರ್ಷಿಣಿ ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆದರೆ ಇಂದು(ಜ.1) ಈಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

https://newsnotout.com/2024/01/student-bba-benglore/
See also  ಸಾಯುತ್ತೇನೆಂದು 35 ಅಡಿ ಆಳದ ಬಾವಿಗೆ ಹಾರಿದ ಯುವಕ..! ಕಾಪಾಡಿ..ಕಾಪಾಡಿ ಎಂದು ಬೊಬ್ಬೆ ಹಾಕಿದವನನ್ನು ದೇವರಂತೆ ಬಂದು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ, ವಿಡಿಯೋ ವೀಕ್ಷಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget