ನ್ಯೂಸ್ ನಾಟೌಟ್: ಮಹಿಳೆಯೋರ್ವಳು ಹಸುವಿನ ಹಾಲು ಕುಡಿದ ಬಳಿಕ ವಾಂತಿ ಮಾಡಲು ಪ್ರಾರಂಭಿಸಿ ಸಾವನ್ನಪ್ಪಿರುವ ಘಟನೆ ನೊಯ್ಡಾದ ಜೆವಾರ್ ನಲ್ಲಿ ಸಂಭವಿಸಿದೆ. ವಾಂತಿಯಾದ ಬಳಿಕ ಕೂಡಲೇ ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಇದಾದ ನಂತರ ಆ ಮಹಿಳೆ ಸಾವನ್ನಪ್ಪಿದ್ದಾಳೆ.
ಆ ಮಹಿಳೆ ರೇಬೀಸ್ ಇರುವ ಹಸುವಿನ ಹಾಲು ಕುಡಿದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆ ಹಸುವನ್ನು ಹುಚ್ಚು ನಾಯಿ ಕಚ್ಚಿತ್ತು. ಅದರಿಂದಾಗಿ ಹಸುವಿಗೆ ರೇಬೀಸ್ ಬಂದಿತ್ತು. ಹಸುವಿನ ಹಾಲಿನ ಮೂಲಕ ರೇಬೀಸ್ ಸೋಂಕು ಮಹಿಳೆಯ ದೇಹಕ್ಕೆ ಹರಡಿತ್ತು. ಅದು ಮಹಿಳೆಯ ಸಾವಿಗೆ ಕಾರಣವಾಯಿತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.