ನ್ಯೂಸ್ ನಾಟೌಟ್: ಪ್ರೀತಿಯಲ್ಲಿ ಬಿದ್ದವರ ಅತಿರೇಕದ ವರ್ತನೆಗಳು ಹಲವು ಭಾರಿ ಇತರರಿಗೂ ಮುಜುಗರವನ್ನು ಉಂಟು ಮಾಡುತ್ತದೆ. . ಕ್ಯಾಬ್ ನಲ್ಲೂ ಆಗುವಂತಹ ಇಂತಹ ನಾಚಿಕೆಗೇಡಿನ ಘಟನೆಗಳಿಂದ ಬೇಸತ್ತು ಬೆಂಗಳೂರಿನ ಕ್ಯಾಬ್ ಡ್ರೈವರ್ ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ ಎಂಬ ವಾರ್ನಿಂಗ್ ಬೋರ್ಡ್ ಒಂದನ್ನು ಕ್ಯಾಬ್ ನಲ್ಲಿ ಹಾಕಿದ್ದಾನೆ.
ಈ ಎಚ್ಚರಿಕೆ ಫಲಕದ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚೆಗೆ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು dancing_pappu ಎಂಬ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಕ್ಯಾಬ್ ನಲ್ಲಿದ್ದ ಈ ಎಚ್ಚರಿಕೆ ಫಲಕದ ಫೋಟೋವನ್ನು ಹಂಚಿಕೊಂಡು, “ಇಂದು ಬೆಂಗಳೂರಿನ ಕ್ಯಾಬ್ ಒಂದರಲ್ಲಿ ಇದನ್ನು ನೋಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Saw this in a cab in Bengaluru today
byu/dancing_pappu inindiasocial
ವೈರಲ್ ಆಗುತ್ತಿರುವ ಎಚ್ಚರಿಕೆ ಫಲಕ ಫೋಟೋದಲ್ಲಿ “ಎಚ್ಚರಿಕೆ!! ನೋ ರೊಮ್ಯಾನ್ಸ್; ಇದು ಕ್ಯಾಬ್. ಖಾಸಗಿ ಸ್ಥಳ ಅಥವಾ ಓಯೋ ಅಲ್ಲ ಆದ್ದರಿಂದ ದಯವಿಟ್ಟು ಇಲ್ಲಿ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಶಾಂತವಾಗಿ ವರ್ತಿಸಿ” ಎಂಬ ಬರಹವನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಭಾರತೀಯ ಅಂಚೆ ಇಲಾಖೆಯಲ್ಲಿ ತಾಂತ್ರಿಕ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ