ಕರಾವಳಿ

ಕಡಬ: ಡೆಂಗ್ಯೂ ಹಾಗೂ ಮಲೇರಿಯಾ ಜ್ವರಕ್ಕೆ ಕೊನೆಯುಸಿರೆಳೆದ ಯುವಕ,31 ವರ್ಷ ಪ್ರಾಯದ ಯುವಕನಿಗೆ ಆಗಿದ್ದೇನು?

ನ್ಯೂಸ್‌ ನಾಟೌಟ್‌ : ಡೆಂಗ್ಯೂ ಹಾಗೂ ಮಲೇರಿಯಾ ಜ್ವರ ವಿಪರೀತವಾದ ಹಿನ್ನೆಲೆ ಯುವಕನೋರ್ವ ಉಸಿರು ಚೆಲ್ಲಿದ ಘಟನೆ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿ ಎಂಬಲ್ಲಿ ನಡೆದಿದೆ. ವಿಮಲಗಿರಿ ಕಲ್ಲೋಲಿಕ್ಕಲ್ ನಿವಾಸಿ 31 ವರ್ಷದ ಶಿಜು ಕಲ್ಲೋಳಿಕಲ್ ಕೊನೆಯುಸಿರೆಳೆದ ಯುವಕ .

ಕಳೆದ ಭಾನುವಾರ ಜ್ವರ ಜಾಸ್ತಿಯಾದ ಹಿನ್ನೆಲೆ ಕಡಬದ ಖಾಸಗಿ ಮೆಡಿಕಲ್ ಸೆಂಟರ್‌ ನಲ್ಲಿ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಜ್ವರ ಪತ್ತೆಯಾಗಿದೆ.ನಂತರ ಮನೆಗೆ ಬಂದ ಶಿಜು ಅವರಿಗೆ ಜ್ವರ ಉಲ್ಬಣಗೊಂಡ ಹಿನ್ನೆಲೆ ಮಂಗಳೂರಿನ ಆಸ್ಪತ್ರೆಗೆ ಹೊರಟಿದ್ದು ದಾರಿ‌ ಮಧ್ಯೆ ಶಿಜು ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.ಶಿಜು ಅವರು ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಅವರ ಸಹೋದರಾಗಿದ್ದಾರೆ.

Related posts

ದಕ್ಷಿಣ ಕನ್ನಡ ಜಿಲ್ಲೆಗೆ ಅಪ್ಪಳಿಸಲಿರುವ ‘ಬಿಪರ್ ಜಾಯ್‌’ ಚಂಡಮಾರುತ ಎಷ್ಟು ಅಪಾಯಕಾರಿ? ಮಂಗಳೂರಿನ ಮೂರು ಬೀಚ್‌ಗಳ ಪ್ರವೇಶಕ್ಕೆ ನಿರ್ಬಂಧಿಸಿದ್ದೇಕೆ?

ನ್ಯೂಸ್ ನಾಟೌಟ್ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆಯವರಿಂದ ಮ್ಯಾಟ್ರಿಕ್ಸ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕುರಿತು ಮಾಹಿತಿ ಕಾರ್ಯಾಗಾರ, ಜೇಸಿಐ ಸುಳ್ಯ ಸಿಟಿ ಸಪ್ತಾಹದ 5ನೇ ದಿನ ವಿಶೇಷ ಕಾರ್ಯಕ್ರಮ ಆಯೋಜನೆ

ಮಂಗಳೂರು: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಗೆ ಬಂದಿಳಿದ ಸಿಎಂ