ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಮತದಾನ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ನಿಧನ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಮತದಾನ ನಡೆದ ಮರುದಿನವೇ ಉತ್ತರ ಪ್ರದೇಶದ ಮೊರಾದಾಬಾದ್‌ನ ಬಿಜೆಪಿ ಅಭ್ಯರ್ಥಿ ಸರ್ವೇಶ್ ಸಿಂಗ್ ನಿಧನರಾಗಿದ್ದಾರೆ. ಮೊರಾದಾಬಾದ್‌ನಲ್ಲಿ (ಎ.20)ನಿನ್ನೆಯಷ್ಟೇ ಮತದಾನ ನಡೆದಿತ್ತು.

ಸರ್ವೇಶ್ ಸಿಂಗ್ ಕೂಡ ಮತ ಚಲಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ. ಅವರ ಹಲ್ಲುಗಳಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆ ನಂತರ ಸಮಸ್ಯೆ ಉಲ್ಬಣಿಸಿದಾಗ ಚಿಕಿತ್ಸೆ ಪಡೆಯಲು ದೆಹಲಿ ಏಮ್ಸ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ನಾಮನಿರ್ದೇಶನಗೊಂಡಾಗಿನಿಂದ ಅವರು ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊದಲ ಹಂತದಲ್ಲಿ ಏಪ್ರಿಲ್ 19ರಂದು ಅವರು ತಮ್ಮ ಸ್ವಗ್ರಾಮ ರತುಪುರದಲ್ಲಿ ಮತ ಚಲಾಯಿಸಿದ್ದರು. ಆದರೆ ಸಂಜೆ ಆರೋಗ್ಯ ಹದಗೆಟ್ಟಿತು. ಕೂಡಲೇ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ 6.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸರ್ವೇಶ್ ಸಿಂಗ್ ಅವರ ಪುತ್ರ ಸುಶಾಂತ್ ಸಿಂಗ್ ಅವರು ಬಿಜ್ನೋರ್‌ನ ಬಾಧಾಪುರ್ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ. ಸರ್ವೇಶ್ ಸಿಂಗ್ ಅವರ ಬಾಯಲ್ಲಿ ಏನೋ ಸಮಸ್ಯೆ ಇತ್ತು. ಇದರಿಂದಾಗಿ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದರಿಂದಾಗಿ ಲೋಕಸಭೆಗೆ ನಾಮಪತ್ರ ಸಲ್ಲಿಸಿದ ದಿನದಿಂದಲೂ ಕ್ಷೇತ್ರದಿಂದ ನಾಪತ್ತೆಯಾಗಿದ್ದರು. ಅವರ ಪುತ್ರ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು. ವಿಶ್ರಾಂತಿ ಪಡೆದ ನಂತರ ಅವರು ಅಮಿತ್ ಶಾ ರ್ಯಾಲಿಯಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಏಪ್ರಿಲ್ 19ರಂದು ಮತದಾನದ ನಂತರ ಮತ್ತೆ ಅಸ್ವಸ್ಥಗೊಂಡ ಅವರು ಶುಕ್ರವಾರ ತಡರಾತ್ರಿ ದೆಹಲಿಯ ಏಮ್ಸ್‌ಗೆ ವೈದ್ಯರನ್ನು ಭೇಟಿಯಾಗಲು ತೆರಳಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಆಂಧ್ರದ ಅರಣ್ಯ ಸಿಬ್ಬಂದಿಗೆ ತರಬೇತಿ, ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಮನವಿ ಮೇರೆಗೆ ಕಾರ್ಯಾಗಾರ

ಮೈಸೂರು ದಸರಾ: ಸಿಡಿಮದ್ದು ತಾಲೀಮಿನ ವೇಳೆ ಅನಾಹುತ..! ಘಟನೆ ನಡೆದಿದ್ದು ಹೇಗೆ..? ಮುಂದೇನಾಯ್ತು?

ಸಮುದ್ರ ತೀರದಲ್ಲಿ ವಿಚಿತ್ರ ಮತ್ತು ಅಪರೂಪದ ‘ಡೂಮ್ಸ್‌ ಡೇ ಫಿಶ್‌’ ಪತ್ತೆ..! ವಿರಳವಾಗಿ ಕಾಣಿಸೋ ಇವು ಬಂದಾಗಲೆಲ್ಲ ಭೂಕಂಪಗಳು ನಡೆದಿವೆ..!