ಕರಾವಳಿ

ಇಂದು ಸಂಜೆಯಿಂದ ಮೂರು ದಿನ ಮದ್ಯದಂಗಡಿ ಬಂದ್

308

ನ್ಯೂಸ್ ನಾಟೌಟ್ :ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 5 ಗಂಟೆಗೆ ತೆರೆ ಬೀಳಲಿದೆ. ಅಲ್ಲದೇ ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಇಂದು ಸಂಜೆ 5 ರಿಂದ  ಮೇ.10ರ ಮಧ್ಯರಾತ್ರಿವರೆಗೆ ಹಾಗೂ ಮೇ.13ರ ಮತಏಣಿಕೆಯಂದು ಮಧ್ಯರಾತ್ರಿಯವರೆಗೆ ಸೇರಿದಂತೆ ಮೂರು ದಿನ ಮದ್ಯದಂಗಡಿಗಳು ಕ್ಲೋಸ್ ಆಗಲಿವೆ.

ಈ ಸಂಬಂಧ ಆಯಾ ಜಿಲ್ಲಾಡಳಿತದಿಂದ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಮತದಾನದ ಪ್ರಯುಕ್ತ ದಿನಾಂಕ 08-05-2023ರ ಸಂಜೆ 5 ಗಂಟೆಯಿಂದ, 10-05-2023ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಏಣಿಕೆ ಪ್ರಯುಕ್ತ ದಿನಾಂಕ 13-05-2023ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ಗಂಟೆಯವೆರೆಗ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ.

ಮತದಾನ ಮತ್ತು ಮತಏಣಿಕೆಯ ಸಂದರ್ಭದಲ್ಲಿ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.ಈ ದಿನಗಳಂದು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ತರಹದ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

See also  ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರಿಂದ ಸಭ್ಯತೆ ಮೀರುವ ಯತ್ನ ಖಂಡನೀಯ-ವಿ.ಸುನೀಲ್ ಕುಮಾರ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget