ಶಿಕ್ಷಣಸುಳ್ಯ

ಎನ್ ಎಂಸಿಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪೇರಡ್ಕ ಎಂ.ಜೆ.ಎಂ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನಿಂದ ಗೌರವ

205

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿ ನ (NMC) ಪದವಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಪೇರಡ್ಕ ಎಂ.ಜೆ.ಎಂ ಹಾಗೂ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಮಜಲಿಸ್ನೂರ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಅವರ ಸುಪುತ್ರ NMC ವಾಣಿಜ್ಯ ವಿಭಾಗದ ಅಹಮದ್ ಅಸ್ಫಾಕ್ , ಬಿಎಸ್ ಡಬ್ಲ್ಯು ವಿದ್ಯಾರ್ಥಿ ಸಫೀಕ್ ಕೆ.ಎಲ್ ಹಾಗೂ ಬಿಎಸ್ ಡಬ್ಲ್ಯು ವಿದ್ಯಾರ್ಥಿ ಇರ್ಫಾನ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿರುವ ಪಾಝಿಲ್ ಕಡೆಪಾಲ ಅವರನ್ನೂ ಶಾಲು ಹೊದಿಸಿ ಗೌರವಿಸಲಾಯಿತು.

ಪೇರಡ್ಕ ಕತೀಬ್ ನಹೀಮ್ ಫೈಝಿ, ಆರಂತೋಡು ಜುಮಾ ಮಸೀದಿ ಖತೀಬ್ ಬಹು ಇಸ್ಮಾಯಿಲ್ ಫೈಝಿ ಉಸ್ತಾದ್ , ಸಹ ಉಸ್ತಾದ್ ರವರುಗಳಾದ ಹಾರೀಸ್ ಅಝಹರಿ, ಆರಂತೋಡು ಮಸೀದಿ ಸಹ ಉಸ್ತಾದ್ ನೌಶಾದ್ ಅಝಹರಿ ಹಾಗೂ ಪೇರಡ್ಕ ಜಮಾಯತ್ ಕಮಿಟಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಸನ್ಮಾನ ಮಾಡಿದರು. ಹಮೀದ್ ಹಾಜಿ ಸುಳ್ಯ, ಸುಪ್ರೀಂ ಅಹಮದ್ ಹಾಜಿ, ಪಾರೆ ಅಹಮದ್, ಅರಂತೋಡು ಜಮಾಯತ್ ಅಧ್ಯಕ್ಷ ಅಶ್ರಫ್ ಗುಂಡಿ, ಜಿ.ಕೆ.ಹಮೀದ್ ಗೂನಡ್ಕ, ಹನೀಫ್ ಮೊಟ್ಟಂಗಾರ್ , ಸಾಜೀದ್ ಅಝಹರಿ, ಪಾಂಡಿ ಅಬ್ಬಾಸ್, ಟಿ.ಎಂ ಬಾಬಾ ಹಾಜಿ,ಉಸ್ಮಾನ್ ಪೇರಡ್ಕ, ಪಿ.ಕೆ.ಉಮ್ಮರ್ ಸೇರಿದಂತೆ ಗಣ್ಯರು ಹಾಜರಿದ್ದರು.

See also  ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿಗೆ ಶೇ. 94.55 ಫಲಿತಾಂಶ, ಮಂಗಳೂರು ವಿವಿ ಪದವಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget