ಕರಾವಳಿಸುಳ್ಯ

ಸುಳ್ಯ:NMC ರಾಷ್ಟ್ರೀಯ ಸೇವಾ ಯೋಜನೆ ಘಟಕ, ವರ್ತಕರ ಸಂಘದ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ-‘ದೀಪಾವಳಿ ವಿಥ್ ಮೈ ಭಾರತ್’ಗೆ ಭಾರಿ ಮೆಚ್ಚುಗೆ

32
Spread the love

ನ್ಯೂಸ್‌ ನಾಟೌಟ್‌: ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವರ್ತಕರ ಸಂಘ ಸುಳ್ಯ ಇದರ ಸಹಯೋಗದೊಂದಿಗೆ ದೀಪಾವಳಿ ವಿಥ್ ಮೈ ಭಾರತ್ ಎಂಬ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಅ.30 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಆರೋಗ್ಯ ಅಧಿಕಾರಿ ಡಾ.ನಂದಕುಮಾರ್ ಭಾಗವಹಿಸಿ ಅಶುಚಿತ್ವ ಹಾಗೂ ಮಾಲಿನ್ಯ ದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.ಈ ವೇಳೆ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಭಾಗವಹಿಸಿ ಮಾತನಾಡುತ್ತಾ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಜೊತೆ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಸದಸ್ಯ ಪ್ರಭಾಕರನ್ ನಾಯರ್, ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಚಿತ್ರಲೇಖ ಕೆ.ಎಸ್. ಹಾಗೂ ಹರಿಪ್ರಸಾದ್ ಎ .ವಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕೆವಿಜಿ ಸರ್ಕಲ್ ನಿಂದ ಕೋರ್ಟ್ ರಸ್ತೆ,ಶಿಕ್ಷಣಾಧಿಕಾರಿಗಳ ಕಚೇರಿ,ಟೌನ್ ಹಾಲ್, ವಿದ್ಯುತ್ ಇಲಾಖೆ ಸೇರಿದಂತೆ ಹಲವೆಡೆ ಸಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.ಈ ವೇಳೆ ಈ ವಿಭಿನ್ನ ಕಾರ್ಯಕ್ರಮಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬಂದವು.

See also  ನಿಲ್ಲಿಸಿದ್ದ ಪಿಕಪ್‌ ಕಳವು ಪ್ರಕರಣ,8 ಮಂದಿ ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು..!
  Ad Widget   Ad Widget   Ad Widget   Ad Widget