ಶಿಕ್ಷಣಸುಳ್ಯ

ಎನ್ ಎಂ ಸಿ ಕಾಲೇಜಿನಿಂದ ಅಧ್ಯಯನ ಪ್ರವಾಸ, ಬಿ ಎ ವಿಭಾಗದಿಂದ ಪ್ರಾಯೋಗಿಕ ಕಲಿಕೆಗೆ ಪ್ರೋತ್ಸಾಹ

152

ನ್ಯೂಸ್ ನಾಟೌಟ್: ನೆಹರು ಮೆಮೋರಿಯಲ್ ಕಾಲೇಜಿನಿಂದ ಮಾರ್ಚ್ 30 ರಂದು ಬಿಎ ಯ ಪ್ರಥಮ ,ದ್ವಿತೀಯ ಹಾಗೂ ತೃತೀಯ ಬಿಎ ವಿದ್ಯಾರ್ಥಿಗಳಿಗೆ ಕ್ಷೇತ್ರ ಪ್ರವಾಸವನ್ನು ಆಯೋಜಿಸಲಾಗಿತ್ತು.

ಬಿಎ ವಿಭಾಗದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿದಂತೆ ಮೈಸೂರಿನಲ್ಲಿರುವ ಎಸ್ ಎಲ್ ವಿ ಪುಸ್ತಕ ತಯಾರಿಕಾ ಕಾರ್ಖಾನೆ, ಮೈಸೂರಿನ ಕೋರ್ಟ್, ಅರಮನೆ, ಕೃಷ್ಣರಾಜಸಾಗರ ಅಣೆಕಟ್ಟಿಗೆ ಹಾಗೂ ಸೈಂಟ್ ಫಿಲೋಮಿನ ಚರ್ಚಿಗೆ ಪ್ರವಾಸ ತೆರಳಿದ್ದು ಈ ಎಲ್ಲಾ ಸ್ಥಳದಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ವಿವರಣೆಯನ್ನು ಪಡೆದುಕೊಂಡು ಶೈಕ್ಷಣಿಕ ಜ್ಞಾನ ವೃದ್ಧಿಗೆ ಸಹಕಾರಿಯಾಗಿತ್ತು.

ಮುಖ್ಯವಾಗಿ ಈ ಪ್ರವಾಸದಲ್ಲಿ ಪುಸ್ತಕ ತಯಾರಿಸುವ ವಿಧಾನ ಹಾಗೂ ಕೋರ್ಟ್ ನಲ್ಲಿರುವ ಎಲ್ಲಾ ಕಾರ್ಯಕಲಾಪದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಪಡೆದುಕೊಂಡು ಅಧ್ಯಯನ ಪ್ರವಾಸದ ಪ್ರಯೋಜನವನ್ನು ಪಡೆದುಕೊಂಡರು. ಪಾಠದ ಜೊತೆ ಜೊತೆಗೆ ಇಂತಹ ಅಧ್ಯಯನ ಪ್ರವಾಸ ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಿತ್ತು.

See also  ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾದಕ ವ್ಯಸನ ಕುರಿತಾದ ಜಾಗೃತಿ ಕಾರ್ಯಕ್ರಮ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುವಂತೆ ಎಸ್.ಐ ಸಂತೋಷ್ ಬಿ.ಪಿ. ಕರೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget