ಸುಳ್ಯ

ಸುಳ್ಯ: NMC ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ.ಟಿ.ವಿಶ್ವನಾಥ್ ಆಯ್ಕೆ

ನ್ಯೂಸ್ ನಾಟೌಟ್ : ಸುಳ್ಯ ದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಎನ್‌ಎಂಸಿ(NMC) ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಇಂದು ಕಾಲೇಜು ಸಭಾಂಗಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಚಂದ್ರ ಕೋಲ್ಚಾರ್ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಇದನ್ನೂ ಓದಿ: ಫ್ರೀ ಬಸ್‌ ಖುಷಿಯಲ್ಲಿ ಏರಿದ ಅಜ್ಜಿಗೆ ಶಾಕ್‌..! ಅಜ್ಜಿಯ ಬ್ಯಾಗ್ ನಿಂದ 30 ಸಾವಿರ ರೂ. ಎಗರಿಸಿದ ಕಳ್ಳರು..!

ಈ ವೇಳೆ ಪ್ರಧಾನ ಕಾರ್ಯದರ್ಶಿಯಾಗಿ ಮಧುರಾ ಎಂ.ಆರ್, ಕೋಶಾಧಿಕಾರಿ ಯಾಗಿ ಲೋಕೇಶ್ ಪೆರ್ಲಂಪಾಡಿಯವರು ಆಯ್ಕೆಯಾದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ., ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಚಂದ್ರ ಗೌಡ ಹಾಗೂ ಉಪನ್ಯಾಸಕ ಪ್ರತಿನಿಧಿ ಕುಲ್ ದೀಪ್ ಪೆಲ್ತಡ್ಕ ಉಪಸ್ಥಿತರಿದ್ದರು.

Related posts

ನ್ಯೂಸ್ ನಾಟೌಟ್ ಡಿಜಿಟಲ್ ಮಾಧ್ಯಮದ ಅಧಿಕೃತ ಕಚೇರಿಗೆ ಚಾಲನೆ

ಸುಳ್ಯ: ಕೆಲಸಕ್ಕೆಂದು ಬಂದವ ಮೊಬೈಲ್ ಮತ್ತು ಬೈಕ್‌ ಕದ್ದು ಪರಾರಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ಸುಳ್ಯ: ತಾಲೂಕು ಮಟ್ಟದ ದಸರಾ ಥ್ರೋಬಾಲ್ ಕ್ರೀಡಾಕೂಟ, ಪ್ರಚಂಡ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಾಗಶ್ರೀ ಫ್ರೆಂಡ್ಸ್