ಶಿಕ್ಷಣಸುಳ್ಯ

ಸುಳ್ಯ: NMC ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಕೌಶಲ್ಯ ತರಬೇತಿ ಸರಣಿ ಕಾರ್ಯಕ್ರಮ, ಉಪ್ಪಿನಕಾಯಿ ತಯಾರಿ, ಬ್ಯಾಗ್ ತಯಾರಿಕೆ, ಕೇಶ ವಿನ್ಯಾಸದಂತಹ ಹತ್ತು ಹಲವು ತರಬೇತಿ

ನ್ಯೂಸ್ ನಾಟೌಟ್: ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅಜ್ಜಾವರ ಹಾಗೂ ಶ್ರೀ ರಕ್ಷಾ ಸಂಜೀವಿನಿ ಒಕ್ಕೂಟ ಅಜ್ಜಾವರದ ಜಂಟಿ ಆಶ್ರಯದಲ್ಲಿ ಕೌಶಲ್ಯ ತರಬೇತಿ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನ. 09 ರಿಂದ ಪ್ರಾರಂಭಗೊಂಡು ನ.30ರವೆಗೆ ಪ್ರತಿ ಶನಿವಾರ ಪೂರ್ವಾಹ್ನ 11 ಗಂಟೆಯಿಂದ 1 ಗಂಟೆಯ ರವರೆಗೆ ಮೇನಾಲದ ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಲಿದೆ.
ಕೌಶಲ್ಯ ತರಬೇತಿಯ ಉದ್ಘಾಟನಾ ಸಮಾರಂಭವು ನ.09ರಂದು ನಡೆಯಲಿದ್ದು, ಅಧ್ಯಕ್ಷತೆಯನ್ನು ಅಜ್ಜಾವರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ವಹಿಸಲಿದ್ದಾರೆ.

ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ ರುದ್ರಕುಮಾರ್ ಎಂ ಎಂ ಉದ್ಘಾಟಿಸಲಿದ್ದಾರೆ. ತರಬೇತಿ ಕಾರ್ಯಾಗಾರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದು ಸೀರೆ ಕುಚ್ಚು, ಉಪ್ಪಿನಕಾಯಿ ತಯಾರಿ, ಮಸಾಲ ಹುಡಿಗಳ ತಯಾರಿಕೆ, ಬ್ಯಾಗ್ ತಯಾರಿಕೆ, ಮ್ಯಾಟ್ ತಯಾರಿಕೆ, ಕೇಶ ವಿನ್ಯಾಸದಂತಹ ಹತ್ತು ಹಲವಾರು ತರಬೇತಿಗಳನ್ನು ನೀಡಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವೃಂದ ಮತ್ತು ಅಜ್ಜಾವರ ಗ್ರಾಮಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ವಿನಂತಿಸಿದ್ದಾರೆ.
ಸಮಾರೋಪ ಸಮಾರಂಭವು ನ.30ರಂದು ನಡೆಯಲಿದೆ. ಸಭಾದ್ಯಕ್ಷತೆಯನ್ನು ಅಜ್ಜಾವರ ಗ್ರಾಮಪಂಚಾಯತ್ ನ ಉಪಾಧ್ಯಕ್ಷರಾದ ಜಯರಾಮ ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ‘ಶ್ರೀರಕ್ಷಾ ಸಂಜೀವಿನಿ ಒಕ್ಕೂಟ’ದ ಅಧ್ಯಕ್ಷರಾದ ಮಮತಾ ನೆರವೇರಿಸಲಿದ್ದಾರೆ.

Click

https://newsnotout.com/2024/11/tejaswi-soorya-kannada-news-viral-news-case-waqf-v/
https://newsnotout.com/2024/11/donald-trump-kannada-news-viral-video-of-pakistani-kannada-news-df/
https://newsnotout.com/2024/11/indian-and-austrlia-press-meet-banned-in-caneda-kannada-news-d/
https://newsnotout.com/2024/11/tailers-kananda-news-womens-commission-kannada-news-d/
https://newsnotout.com/2024/11/idbi-bank-of-india-job-vecancy-news-salary/

Related posts

ಸುಳ್ಯ : ಕೆ.ವಿ.ಜಿ ಐಪಿಎಸ್‌ನಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಿಂದ ‘ಅಬಾಕಸ್ ‘ ಗಣಿತ ತರಗತಿ ಉದ್ಘಾಟನೆ

KVG ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಫ್ಯಾಕಲ್ಟಿ ಡವಲಪ್ ಮೆಂಟ್’ ಕಾರ್ಯಕ್ರಮ, ಹೊಸ ಕಲಿಕಾ ವಿಧಾನದ ವಿಚಾರ ವಿನಿಮಯ

ರೈಲಿನಡಿಗೆ ಬಿದ್ದು ಎಡಮಂಗಲ ಗ್ರಾಮದ ಪಟ್ಲದಮೂಲೆ ಯುವಕ ಸಾವು