ಕ್ರೈಂವೈರಲ್ ನ್ಯೂಸ್ಸಿನಿಮಾ

ಪುಸ್ತಕ ಮಾರುತ್ತಾ ಬಂದ ಬಾಲಕ ಖ್ಯಾತ ನಟಿಯ ಕೈಯಲ್ಲಿದ್ದ ಹಣ ಕಸಿದು ಪರಾರಿ..! 8 ವರ್ಷದ ಬಾಲಕನ ಬಗ್ಗೆ ನಟಿ ಹೇಳಿದ್ದೇನು..?

191

ನ್ಯೂಸ್ ನಾಟೌಟ್: ಖ್ಯಾತ ಕಾಲಿವುಡ್‌ – ಟಾಲಿವುಡ್‌ ನಟಿ ನಿವೇತಾ ಪೇತುರಾಜ್ (Nivetha Pethuraj) ಬಳಿಯಿಂದ 8 ವರ್ಷದ ಬಾಲಕನೊಬ್ಬ ಹಣ ಕಸಿದುಕೊಂಡು ಪರಾರಿ ಆಗಿರುವ ಘಟನೆ ನಡೆದಿದ್ದು, ಈ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಲಿವುಡ್‌ – ಟಾಲಿವುಡ್‌ ಸಿನಿಮಾರಂಗದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ನಿವೇತಾ ಪೇತುರಾಜ್ ತಮ್ಮ ಜತೆ ನಡೆದ ಕಹಿ ಘಟನೆಯೊಂದರ ಬಗ್ಗೆ ಬರೆದುಕೊಂಡಿದ್ದಾರೆ.

ಚೆನ್ನೈನ ಅಡ್ಯಾರ್ ಸಿಗ್ನಲ್ ನಲ್ಲಿ ಕಾರಿನಲ್ಲಿದ್ದ ನಿವೇತಾ ಬಳಿ 8 ವರ್ಷ ಬಾಲಕನೊಬ್ಬ ಪುಸ್ತಕ ಮಾರುತ್ತಾ ಬಂದಿದ್ದಾನೆ. 50 ರೂಪಾಯಿಗೆ ಪುಸ್ತಕ ಮಾರಾಟ ಮಾಡುತ್ತಿದ್ದ ಬಾಲಕನ ಕೈಗೆ ನಟಿ 100 ರೂಪಾಯಿ ಕೊಟ್ಟಿದ್ದಾರೆ. ಆದರೆ ಈ ವೇಳೆ ಬಾಲಕ ನಟಿಯಿಂದ 500 ರೂಪಾಯಿ ಕೇಳಿದ್ದಾನೆ. ಇದಕ್ಕೆ ನಿವೇತಾ ಅವರು ಕೂಡಲೇ ಪುಸ್ತಕವನ್ನು ಹಿಂದಕ್ಕೆ ಕೊಟ್ಟು 100 ರೂಪಾಯಿ ವಾಪಾಸ್‌ ತೆಗೆದುಕೊಂಡಿದ್ದಾರೆ. ಇದರಿಂದ ಬಾಲಕ ನಟಿಯ ಕಾರಿನೊಳಗೆ ಪುಸ್ತಕ ಬಿಸಾಕಿ ಕೈಯಲ್ಲಿದ್ದ ಹಣವನ್ನು ಕಸಿದು ಓಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ನಟಿ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ. ʼಒರು ನಾಲ್ ಕೂತು’ ಸಿನಿಮಾದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ನಿವೇತಾ ʼಟಿಕ್‌ ಟಿಕ್‌ ಟಿಕ್‌ʼ ‘ಚಿತ್ರಲಹರಿ’, ‘ಪೊಡುವಗ ಎಮ್ಮನಸು ತಂಗಂ’, ‘ಬ್ರೋಚೆವರೆವರೂರ’ ಸೇರಿದಂತೆ ಹಲವು ತಮಿಳು – ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

Click

https://newsnotout.com/2024/11/guruprasad-kananda-news-lawyer-gajadeesh-kannada-news-video/
https://newsnotout.com/2024/11/bantwal-kannada-news-bike-and-bus-collision-hospitalized/
https://newsnotout.com/2024/11/duplicate-document-creation-and-waqf-issue-bjp/
https://newsnotout.com/2024/11/online-gaming-kannada-news-guruprasad-about-director-and-jaggesh/
https://newsnotout.com/2024/11/kannada-news-cctv-putage-kannada-news-crackers/
See also  ಓರ್ವನನ್ನು ರಕ್ಷಣೆ ಮಾಡಲು ಹೋಗಿ ನಾಲ್ವರ ದುರಂತ ಅಂತ್ಯ..! ಸಿದ್ದಗಂಗಾ ಮಠದಲ್ಲಿ 6 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದ ಮಕ್ಕಳ ಈ ಸಾವಿಗೆ ಕಾರಣವೇನು? ಸಿದ್ದಗಂಗಾ ಮಠದಲ್ಲೀಗ ಮನಕಲಕುವ ನೀರವಮೌನ..!
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget