ಕ್ರೀಡೆ/ಸಿನಿಮಾ

ಕೆಟ್ಟ ಕಾಮೆಂಟ್‌ ಹಾಕೋರ ಜನ್ಮ ಜಾಲಾಡಿದ ನಿವೇದಿತಾ ಗೌಡ,ಐ ಡೋಂಟ್‌ ಕೇರ್, ಅದು ನಿಮ್ಮ ಸಂಸ್ಕಾರ ತೋರಿಸುತ್ತೆ ಎಂದ ನಟಿ

167

ನ್ಯೂಸ್‌ ನಾಟೌಟ್:ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿದ್ದಾರೆ. ಅವರ ಪರ್ಸನಲ್ ಲೈಫ್ ಕುರಿತಂತೆ ಅವರು ಆಗಾಗ ಪೋಸ್ಟ್ ಮಾಡ್ತಾನೆ ಇರುತ್ತಾರೆ. ಇದಕ್ಕೆ ಹಲವರು ನಾನಾ ತರಹದ ಕಾಮೆಂಟ್‌ ಗಳನ್ನು ಹಾಕುತ್ತಿದ್ದಾರೆ. ಇನ್ನೂ ಕೆಲವರು ಈಕೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಲು ಶುರು ಮಾಡಿದರು. ಆಕೆಯ ಮಾಡರ್ನ್ ಡ್ರೆಸ್‌ಗೆ ಎಷ್ಟೋ ಹೆಂಗಸರು ಕೂಡ ಕಾಮೆಂಟ್ ಮಾಡ್ತಾ ಹೋದ್ರು.

ಹೀಗೆ ಎಲ್ಲರ ಟಾರ್ಗೆಟ್ ಆಯ್ತು ನಿವೇದಿತಾ ಪರ್ಸನಲ್ ಲೈಫ್.ಇಂಥವರಿಗೆ ಉತ್ತರ ಕೊಡುವ ಕೆಲಸವನ್ನು ನಿವೇದಿತಾ ಇದುವರೆಗೆ ಮಾಡಿರಲಿಲ್ಲ. ಆದರೆ ಆಕೆಯ ಬಗ್ಗೆ ಬರುತ್ತಿದ್ದ ಕಾಮೆಂಟ್‌ಗೆ ಆಕೆಯ ಮಾಜಿ ಪತಿ ಚಂದನ್‌ ಶೆಟ್ಟಿಯೇ ನೊಂದುಕೊಂಡು ಮಾತನಾಡಿದ್ದರು. ಜನರ ಮನಸ್ಥಿತಿ ಇಷ್ಟೊಂದು ಗಲೀಜಾ? ಹೆಣ್ಣುಮಕ್ಕಳ ಅಂಗಗಳ ಬಗ್ಗೆ ಮಾತನಾಡುವವರು ತಮ್ಮನೆ ಹೆಣ್ಣುಮಕ್ಕಳಿಗೆ ಯಾರಾದರೂ ಹೀಗೆ ಹೇಳಿದರೂ ಅದನ್ನು ಸ್ವೀಕರಿಸುತ್ತಾ ಎಂದು ನೋವಿಂದ ನುಡಿದರು.

ಇದಕ್ಕೆ ಆಕೆ ತುಂಡು ಬಟ್ಟೆ ಹಾಕ್ತಾರೆ ಅನ್ನೋ ಮಾತನ್ನು ಕೆಲವರು ಹೇಳಬಹುದು. ಆದರೆ ಜಗತ್ತಿನ ಹೆಸರಾಂತ ನಟಿ ಕಿಮ್‌ ಕಾರ್ಡಿಶಿಯಾನ್‌ರಿಂದ ಹಿಡಿದು ಇತ್ತೀಚೆಗೆ ಇಂಡಸ್ಟ್ರಿಗೆ ಅಡಿಇಟ್ಟವರವರೆಗೆ ಎಲ್ಲರೂ ಮಾಡರ್ನ್ ಡ್ರೆಸ್ ತೊಡುತ್ತಾರೆ. ಅವರ ವೃತ್ತಿಗೆ ಅದು ಸಹಜ. ಇದನ್ನು ನೋಡಲು ಇಷ್ಟವಾಗದಿದ್ದರೆ ಅವರ ವಾಲ್‌ ಅನ್ನು ಅನ್‌ ಫಾಲೋ ಮಾಡಿದ್ರೆ ಕಥೆ ಮುಗೀತು. ಅದು ಬಿಟ್ಟು ತಮ್ಮ ಮನಸ್ಸಿನ ಹೊಲಸನ್ನೆಲ್ಲ ಅಲ್ಲಿ ತಂದು ಸುರಿಯೋ ಅವಶ್ಯಕತೆ ಇಲ್ಲವಲ್ಲ ಅಂತ ಪ್ರಜ್ಞಾವಂತರು ಹೇಳ್ತಾರೆ.

ಸಂದರ್ಶನವೊಂದರಲ್ಲಿ ನಿವೇದಿತಾ ಗೌಡ ತನ್ನ ಪೋಸ್ಟಿಗೆ ಕೊಳಕು ಕಾಮೆಂಟ್ ಮಾಡುವವರ ವಿರುದ್ಧ ದನಿ ಎತ್ತಿದ್ದಾರೆ. ಆರಂಭದಲ್ಲಿ ಮೊದಲಿಗೆ ನನಗೆ ಬರುವ ಕಾಮೆಂಟ್‌ಗಳನ್ನು ನಾನು ನೋಡುವುದಿಲ್ಲ ಎಂದಿರುವ ನಿವೇದಿತಾ ಅಪ್ಪಿ ತಪ್ಪಿ ನೋಡಿದರೂ ಕೂಡ ಏನೂ ಮಾಡೋಕಾಗಲ್ಲ ಎಂದಿದ್ದಾರೆ.ಜೊತೆಗ ತೀರಾ ಕೆಟ್ಟಾ ಕೊಳಕು ಕಾಮೆಂಟ್ ಮಾಡಿದರೆ ಅದು ಅವರ ಮನಸ್ಥಿತಿಯನ್ನು ತೋರಿಸುತ್ತೆ. ಅವರ ಸಂಸ್ಕಾರವನ್ನು ತೋರಿಸುತ್ತೆ ಎಂದಿರುವ ನಿವೇದಿತಾ ಗೌಡ ಯಾರು ಯಾರಿಗೂ ನೋವು ಕೊಡಬಾರದು ಆದರೂ ನೋವು ಕೊಡುತ್ತಾರೆ ಅಂದರೆ ಅದು ಅವರ ವ್ಯಕ್ತಿತ್ವವನ್ನು ತೋರಿಸುತ್ತೆ ಎಂದು ಹೇಳಿದ್ದಾರೆ.

See also  ಕೇವಲ 9 ಗಂಟೆಯೊಳಗೆ ಈ ನಟಿಗೆ ಒಂದು ಮಿಲಿಯನ್‌ಗಿಂತಲೂ ಅಧಿಕ ಫಾಲವರ್ಸ್..!,ಆ ನಟಿ ಯಾರು ಗೊತ್ತೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget