ಕ್ರೀಡೆ/ಸಿನಿಮಾವಿಡಿಯೋವೈರಲ್ ನ್ಯೂಸ್

ನಿತ್ಯಾನಂದನ ಕೈಲಾಸ ದೇಶದಲ್ಲಿ ಕನ್ನಡದ ಜೋಗಯ್ಯ ಹಾಡು..! ಸ್ವಯಂ ಘೋಷಿತ ದೇವ ಮಾನವನ ವೈರಲ್ ವಿಡಿಯೋ ಇಲ್ಲಿದೆ

129

ನ್ಯೂಸ್ ನಾಟೌಟ್: ಪ್ರೇಮ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್‌ ಅಭಿನಯಿಸಿರುವ ‘ಜೋಗಯ್ಯ’ ಚಿತ್ರದ ಟೈಟಲ್‌ ಹಾಡಿಗೆ ನಿತ್ಯಾನಂದ ಡ್ರಮ್ಸ್‌ ಬಾರಿಸುತ್ತಿದ್ದಾರೆ. ಪುಟ್ಟ ಮಕ್ಕಳಂತೆ ಡ್ರಮ್ಸ್‌ ಬಾರಿಸುತ್ತಾ ಎಂಜಾಯ್‌ ಮಾಡುತ್ತಿರುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಭಾರತದಿಂದ ತಲೆ ಮರೆಸಿಕೊಂಡು ಹೋಗಿ ವಿದೇಶದಲ್ಲಿ ನೆಲೆಸಿದ್ದರೂ ನಿತ್ಯಾನಂದ ಮಾತ್ರ ಪ್ರತಿದಿನ ಅಲ್ಲಿಂದಲೇ ಸುದ್ದಿಯಾಗುತ್ತಿದ್ದಾರೆ. ಅತ್ಯಾಚಾರ, ಅಪಹರಣ ಕೇಸ್‌ ಆರೋಪ ಹೊತ್ತಿರುವ ನಿತ್ಯಾನಂದ ಕಳೆದ 4 ವರ್ಷಗಳ ಹಿಂದೆ ರಾತ್ರೋ ರಾತ್ರಿ ಭಾರತದಿಂದ ಪರಾರಿಯಾಗಿ ಈಕ್ವೆಡಾರ್‌ ಕರಾವಳಿ ದ್ವೀಪದಲ್ಲಿ ಕೈಲಾಸ ಹೆಸರಿನ ತನ್ನದೇ ಲೋಕವನ್ನು ಕಟ್ಟಿಕೊಂಡಿರುವುದು ಎಲ್ಲರಿಗೂ ತಿಳಿಸಿದೆ.

ಇತ್ತೀಚೆಗೆ ತನ್ನ ಪ್ರೀತಿಯ ಶಿಷ್ಯೆ, ನಟಿ ರಂಜಿತಾಳನ್ನು ತನ್ನ ಕೈಲಾಸ ದೇಶದ ಪ್ರಧಾನಿಯನ್ನಾಗಿ ಘೋಷಿಸಿ ಕೂಡಾ ನಿತ್ಯಾನಂದ ಸುದ್ದಿಯಾಗಿದ್ದರು. ರಂಜಿತಾ ಮಾತ್ರವಲ್ಲ ಆಕೆಯ ಅಕ್ಕ ಕೂಡಾ ಪತಿಯಿಂದ ದೂರಾಗಿ ನಿತ್ಯಾನಂದ ಆಶ್ರಮದಲ್ಲೇ ನೆಲೆಸಿದ್ದಾರೆ. ರಂಜಿತಾ ತಂದೆ ಇತ್ತೀಚೆಗೆ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ತಾನು ಕಟ್ಟಿರುವ ಕೈಲಾಸ ದೇಶಕ್ಕಾಗಿ ಅದ್ದರದ್ದೇ ಪ್ರತ್ಯೇಕ ಲಾಂಛನ, ಧ್ವಜ, ಪಾಸ್‌ಪೋರ್ಟ್‌ ಕೂಡಾ ಸೃಷ್ಟಿ ಮಾಡಲಾಗಿದೆ. ಇದು ಸಂಪೂರ್ಣ ಹಿಂದೂ ದೇಶ ಎಂದು ಹೇಳಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ನಿತ್ಯಾನಂದ ಖಾತೆ ಇದ್ದು ಕೈಲಾಸದಲ್ಲಿ ನಡೆಯುವ ಚಟುವಟಿಕೆಗಳನ್ನು ಫೋಟೋ, ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಿತ್ಯಾನಂದ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಬಹಳ ವೈರಲ್‌ ಆಗುತ್ತಿದೆ.

ನಿತ್ಯಾನಂದ ಸೃಷ್ಟಿಸಿರುವ ಕೈಲಾಶ ಆಶ್ರಮದಲ್ಲಿ ಭಜನೆಯೂ ನಡೆಯುತ್ತದೆ. ಆದರೆ ಇದು ಅಂತಿಂಥ ಭಜನೆ ಅಲ್ಲ, ಸಿನಿಮಾ ಹಾಡುಗಳಿಗೆ ಭಕ್ತರು ಕುಣಿದ ಕುಪ್ಪಳಿಸುವಂಥ ಭಜನೆ. ರಜನಿಕಾಂತ್‌ ‘ಪಡಯಪ್ಪ’ ಚಿತ್ರದ ಹಾಡಿಗೆ ನಿತ್ಯಾನಂದನ ಭಕ್ತರು ಕುಣಿದಾಡಿದ್ದ ವಿಡಿಯೋ 3 ವರ್ಷಗಳ ಹಿಂದೆ ವೈರಲ್‌ ಆಗಿತ್ತು. ಇದೀಗ ನಿತ್ಯಾನಂದ ತಮ್ಮ ಆಶ್ರಮದಲ್ಲಿ ಕನ್ನಡದ ಹಾಡಿಗೆ ಡ್ರಮ್ಸ್‌ ಬಾರಿಸುತ್ತಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

See also  ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ..! ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್ ನಟ
  Ad Widget   Ad Widget   Ad Widget   Ad Widget   Ad Widget