ದೇಶ-ಪ್ರಪಂಚ

ವಾಹನ ಚಾಲಕರಿಗೂ ಚಾಲನೆ ಅವಧಿ ನಿಗದಿಯಾಗಲಿ: ಸಚಿವ ಗಡ್ಕರಿ

ನವದೆಹಲಿ: ಪೈಲಟ್‌ಗಳ ಮಾದರಿಯಲ್ಲಿ ವಾಣಿಜ್ಯ ಟ್ರಕ್ ಗಳ ಚಾಲಕರಿಗೂ ಚಾಲನಾ ಸಮಯ ವನ್ನು ನಿಗದಿಗೊಳಿಸಬೇಕು ಹಾಗೂ ಟ್ರಕ್ ಗಳಲ್ಲಿ ನಿದ್ದೆ ಪತ್ತೆ ಹಚ್ಚುವ ಸಂವೇದಕಗಳನ್ನು ಅಳವಡಿಸ ಬೇಕು. ಇದು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಚಾಲಕರು ಆಯಾಸರಹಿತವಾಗಿ ವಾಹನ ಚಲಾಯಿಸಲು ಅನುಕೂಲವಾಗುವಂತೆ ನಿರ್ದಿಷ್ಟ ಚಾಲನಾ ಸಮಯವನ್ನು ನಿಗದಿಗೊಳಿಸಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಯುರೋಪಿಯನ್ ಮಾನದಂಡಗಳಿಗೆ ಸಮನಾದ ವಾಣಿಜ್ಯ ಸೇವೆಗಳಿಗೆ ಬಳಸುವ ವಾಹನಗಳಲ್ಲಿ ಆನ್ಬೋರ್ಡ್ ಸ್ಲೀಪ್ ಡಿಟೆಕ್ಷನ್ ಸೆನ್ಸರ್ಗಳನ್ನು ಅಳವಡಿಸುವ ಕುರಿತು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾ ರಸ್ತೆ ಸಮಿತಿ ಸಭೆಗಳು ನಿಯಮಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿಯೂ’ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Related posts

ನೂರಕ್ಕೂ ಅಧಿಕ ವಿವಾಹವಾಗಿದ್ದೇ ಈತನ ಸಾಹಸ!,ಒಬ್ಬಳಿಗೂ ವಿಚ್ಛೇದನ ಕೊಟ್ಟಿಲ್ಲವನ್ನೋದು ವಿಶೇಷ!

ಗೃಹಪ್ರವೇಶಕ್ಕೆ ಬರಬೇಕಿದ್ದ ಮಗ ಪಾರ್ಥೀವ ಶರೀರವಾಗಿ ತಲುಪಿದ್ದ.. ! ಭಯೋತ್ಪಾದಕ ದಾಳಿಯಲ್ಲಿ ಕೊನೆಯುಸಿರೆಳೆದ ಯೋಧನ ಕಣ್ಣೀರ ಕಥೆ!

ರಾಷ್ಟ್ರಪತಿ ಭಾಷಣದ ವೇಳೆ ವಿದ್ಯುತ್ ಕಡಿತ..! ಇಲ್ಲಿದೆ ವಿಡಿಯೋ