Latest

ಮೋದಿ ಬೆಸ್ಟೋ,ಅಂಬಾನಿಯೋ ಯಾರ ಹೆಸರನ್ನು ತೆಗೆದುಕೊಳ್ಳುವಿರಿ? ಏಕಾಏಕಿ ಎದುರಾದ ಪ್ರಶ್ನೆಗೆ ನೀತಾ ಅಂಬಾನಿ ಉತ್ತರಿಸಿದ್ದೇನು?ಪ್ರಶ್ನೆ ಕೇಳಿದವರೇ ತಬ್ಬಿಬ್ಬು!

741
Spread the love

ನ್ಯೂಸ್‌ ನಾಟೌಟ್‌ : ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆ ಆದ ನೀತಾ ಅಂಬಾನಿ ಅವರಿಗೆ ಮ್ಯಾಸಚೂಸೆಟ್ಸ್ ಗವರ್ನರ್ ಮೌರಾ ಹೀಲಿ ಅವರು ವಿಶಿಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ,  ಗವರ್ನರ್ ಮೌರಾ ಹೀಲಿ, ಅವರು, ನೀತಾ ಅಂಬಾನಿ ಅವರು ದಾರ್ಶನಿಕ ನಾಯಕಿ, ಸಹಾನುಭೂತಿಯ ಲೋಕೋಪಕಾರಿ ಮತ್ತು ನಿಜವಾದ ಜಾಗತಿಕ ಬದಲಾವಣೆಯ ಹರಿಕಾರಿಣಿ ಎಂದು ಬಣ್ಣಿಸಿದ್ದರು.ಈ ವೇಳೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. 

ನೀತಾ ಅಂಬಾನಿ ಅವರನ್ನು ಸಂದರ್ಶನ ಮಾಡಿದ್ದ ವಿಡಿಯೋ ಇದೀಗ ವೈರಲ್​ ಆಗುತ್ತಿದೆ. ಅದರಲ್ಲಿ ಅವರಿಗೆ ಬಹಳ ಕ್ಲಿಷ್ಟಕರ ಪ್ರಶ್ನೆಯೊಂದನ್ನು ಕೇಳಲಾಗಿತ್ತು.ಪ್ರಧಾನಿ ನರೇಂದ್ರ ಮೋದಿ ಮತ್ತು ಮುಕೇಶ್​ ಅಂಬಾನಿ ಇಬ್ಬರ ನಡುವೆ ಒಬ್ಬರ ಹೆಸರನ್ನು ತೆಗೆದುಕೊಳ್ಳುವುದಾದರೆ ಯಾರ ಹೆಸರನ್ನು ತೆಗೆದುಕೊಳ್ಳುವಿರಿ ಎಂದು ಪ್ರಶ್ನಿಸಲಾಗಿದೆ. ಈ ಪ್ರಶ್ನೆಗೆ ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ. ಇಬ್ಬರಲ್ಲಿ ಒಬ್ಬರ ಆಯ್ಕೆ ಎಂದರೆ ಏನರ್ಥ? ಎಂಥ ಅಸಂಬಂಧ ಪ್ರಶ್ನೆ, ಪ್ರಶ್ನೆ ಕೇಳುವವರಿಗೆ ತಲೆ ಇಲ್ವಾ ಎಂದೆಲ್ಲಾ ಕಮೆಂಟ್​ಗಳ ಸುರಿಮಳೆಯಾಗಿದೆ. 

ಪ್ರಶ್ನೆ ಏನೇ ಇರಲಿ, ನೀತಾ ಅಂಬಾನಿ ಮಾತ್ರ ಸ್ವಲ್ಪವೂ ವಿಚಲಿತರಾಗದೇ ಕೊಟ್ಟ ಉತ್ತರ ಮಾತ್ರ ಎಲ್ಲರ ಹೃದಯ ಗೆದ್ದಿದೆ. ಅಷ್ಟಕ್ಕೂ ನೀತಾ ಅವರು ಹೇಳಿದ್ದೇನೆಂದರೆ, ಮೋದಿಜಿ ಅವರು ಇಡೀ ದೇಶಕ್ಕೆ ಉತ್ತಮರು, ನನ್ನ ಗಂಡ ಮುಕೇಶ್​ ನನ್ನ ಕುಟುಂಬಕ್ಕೆ ಉತ್ತಮರು ಎಂದು ಉತ್ತರಿಸಿದ್ದಾರೆ. ಇವರ ಈ ಉತ್ತರಕ್ಕೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಶ್ನೆಯೇ ಸರಿಯಿಲ್ಲ ಎಂದು ಹೇಳುವವರು ಒಂದೆಡೆಯಾದರೆ, ಇಂಥ ಪ್ರಶ್ನೆಗೂ ನೀತಾ ಅವರು ಕೊಟ್ಟ ಉತ್ತರ ಶ್ಲಾಘನಾರ್ಹ ಎಂದು ಬಣ್ಣಿಸಿದ್ದಾರೆ.

 

View this post on Instagram

 

A post shared by Viral Bhayani (@viralbhayani)

See also  ಮುಸ್ಲಿಂ ಯುವಕನನ್ನು ಮದುವೆ ಆಗಿದ್ದೀನಿ, ಮನೆಗೆ ಬರಲ್ಲ ಎಂದ ಯುವತಿ!ಮಗಳ ಮಾತನ್ನು ಕೇಳಿ ಕಣ್ಣೀರು ಹಾಕುತ್ತಾ ಅಲ್ಲೇ ಕುಸಿದು ಬಿದ್ದ ತಾಯಿ!
  Ad Widget   Ad Widget   Ad Widget