ಕ್ರೈಂ

ನಿಂತಿಕಲ್ಲಿಗೆ ಆಟೋ ಏರಿ ಔಷಧಿಗೆಂದು ಹೋದ ಯುವಕ ಹೃದಯಾಘಾತಕ್ಕೆ ಬಲಿ, ಚೆಂಬು ಆನ್ಯಾಳದ ಯುವಕ ದಾರುಣ ಸಾವು

ನ್ಯೂಸ್ ನಾಟೌಟ್: ಹುಷಾರಿಲ್ಲ ಎಂದು ನಿಂತಿಕಲ್ಲಿಗೆ ಔಷಧಿಗೆ ಹೋದ ಯುವಕನೊಬ್ಬ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಡೆದಿದೆ.

ಮೃತರ ಹೆಸರು ಚಂದ್ರಶೇಖರ್ ಬಿಬಿ ಪೂಜಾರಿ, ಅವರಿಗೆ 35 ವರ್ಷವಾಗಿತ್ತು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ತೀರ ನಿತ್ರಾಣಗೊಂಡಿದ್ದರು. ಹೀಗಾಗಿ ಅವರನ್ನು ಆಟೋದಲ್ಲಿ ಕರೆದುಕೊಂಡು ನಿಂತಿಕಲ್ಲಿಗೆ ಹೋಗಲಾಗಿತ್ತು. ಅಲ್ಲಿಂದ ಆಟೋದಲ್ಲಿ ವಾಪಸ್ ಬರುವಾಗ ದಾರಿ ಮಧ್ಯೆ ಸುಸ್ತಾದಂತೆ ಆಗಿದೆ.

ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲಾಗಿತ್ತು. ಈ ವೇಳೆ ಚಂದ್ರಶೇಖರ್ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಚಂದ್ರಶೇಖರ್ ಅವರು ಮೂಲತಃ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಚೆಂಬು ಗ್ರಾಮದ ಆನ್ಯಾಳದವರಾಗಿದ್ದಾರೆ. ಮೃತರು ಮೂವರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.

https://www.youtube.com/watch?v=pw95EAmlpP8

Related posts

ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತಕ್ಕೆ 2ನೇ ಸ್ಥಾನ..! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಮೋದಿಗೆ ಹೇಳಿದ್ದೇನು?

ತುರ್ತು ಭೇಟಿಗೆ ಮನವಿ ಮಾಡಿದ ದರ್ಶನ್..! ನಾಳೆಯೇ(ಸೆ.10) ಬಳ್ಳಾರಿ ​ ಜೈಲಿಗೆ ಬರಲಿದ್ದಾರೆ ದರ್ಶನ್ ತಾಯಿ ಮತ್ತು ಪತ್ನಿ..!

ದುಬೈಯ ಸಮುದ್ರದಲ್ಲಿ ಮುಳುಗಿ ಕಾಸರಗೋಡಿನ ಬಾಲಕ ಸಾವು..! ಇಲ್ಲಿದೆ ಸಂಪೂರ್ಣ ಮಾಹಿತಿ