ನ್ಯೂಸ್ ನಾಟೌಟ್: ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಘಟನೆ ಫೆ.15ರಂದು ನಡೆದಿದೆ.
ನಿಂತಿಕಲ್ಲು ಎಣ್ಮೂರು ಕಲ್ಲೇರಿ ಸುಂದರ್ ಅನ್ನುವವರು ಸಾವಿಗೀಡಾದವರು. ಮೂರು ದಿನದ ಹಿಂದೆ ವಿಷ ಸೇವಿಸಿದ್ದರು. ಅವರನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.