ಕಾಸರಗೋಡು

ನೀನಾಸಂಗೆ ಬೆಳ್ಳಿಪ್ಪಾಡಿಯ ಪ್ರತಿಭಾವಂತ ಯುವತಿ ಆಯ್ಕೆ, ಗಡಿನಾಡ ಕನ್ನಡತಿಯ ಪ್ರಯತ್ನಕ್ಕೊಲಿದ ಅದೃಷ್ಟ

194

ನ್ಯೂಸ್ ನಾಟೌಟ್: ಕನ್ನಡ ಸಿನಿಮಾ ರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ನೀನಾಸಂ ರಂಗ ಶಿಕ್ಷಣ ಕೇಂದ್ರಕ್ಕೆ 2024-25 ಸಾಲಿನ ವಿದ್ಯಾರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಗಡಿ ಭಾಗವಾಗಿರುವ ಕಾಸರಗೋಡಿನ ಪ್ರತಿಭಾವಂತೆ ಬೆಳ್ಳಿಪ್ಪಾಡಿಯ ಸುಶ್ಮಿತಾ ಮೋಹನ್ ಆಯ್ಕೆಯಾಗಿದ್ದಾರೆ.

ಸುಶ್ಮಿತಾ ಪುತ್ತೂರಿನ ಮಕ್ಕರ್ ಟೀಮ್ ನ ಹಾಲಿ ಕಲಾವಿದೆಯಾಗಿದ್ದಾರೆ. ಕರಾವಳಿಯ ಚಾನಲ್ ಒಂದು ನಡೆಸುತ್ತಿದ್ದ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಇವರು ಅರೆಭಾಷೆ ನಾಟಕ, ಕನ್ನಡ ನಾಟಕ, ತುಳು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.

ನೀನಾಸಂಗೆ ವಿವಿಧ ಜಿಲ್ಲೆಗಳಿಂದ ಒಟ್ಟು 16 ಮಂದಿ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ತ್ರಿಶಾ ಡಿ ಶೆಟ್ಟಿ ಆಯ್ಕೆಯಾಗಿದ್ದಾರೆ.

See also  351 ವರ್ಷಗಳ ನಂತರ ಅದೂರ್ ಭಗವತಿ ಕ್ಷೇತ್ರದಲ್ಲಿ ಪೆರುoಕಳಿಯಾಟ್ಟ ಮಹೋತ್ಸವ:ಪೂರ್ವ ತಯಾರಿಯಾಗಿ ನಡೆದ ಸಾವಯವ ಭತ್ತ ಕೃಷಿಯ ಕೊಯ್ಲೋತ್ಸವ ಹಾಗೂ ಡಂಗುರ ಮೆರವಣಿಗೆ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget