ಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯ: ಎನ್.ಎಂ.ಸಿ.ಯಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ ಉದ್ಯೋಗ ಮೇಳ, 79 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆ

146

ನ್ಯೂಸ್ ನಾಟೌಟ್ :ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಂಗಳವಾರ (ಅ.22 ) ಎನ್.ಐ.ಐ.ಟಿ ಮಂಗಳೂರು ವತಿಯಿಂದ “ಉದ್ಯೋಗ ಮೇಳ 2024” ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಮಂಗಳೂರು ಎನ್.ಐ.ಐ.ಟಿ.ಯ ಐ.ಎಫ್.ಬಿ.ಐ ನ ವೃತ್ತಿ ಸಲಹೆಗಾರರಾದ ಶ್ರೀನಿಧಿ ಹಾಗೂ ರಮ್ಯ ಆಗಮಿಸಿದ್ದರು.

ಉದ್ಯೋಗ ಮೇಳದಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ, ಎಂ.ಎಸ್ಸಿ, ಎಂ.ಕಾಂ, ಎಂ.ಬಿ.ಎ, ಇಂಜಿನಿಯರಿಂಗ್, ಎಂ.ಎಸ್.ಡಬ್ಲ್ಯೂ ಹೀಗೆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶ ಒದಗಿಸಿದ್ದು, 200ಕ್ಕೂ ಅಧಿಕ ಆಕಾಂಕ್ಷಿಗಳು ನೋಂದಾಯಿಸಿದ್ದು, 79 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆಗೊಂಡಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ. ವಹಿಸಿದ್ದರು. ಆಂತರಿಕ ಗುಣಮಟ್ಟ ಖಾತರಿ ಕೋಶ ನಿರ್ದೇಶಕಿ ಡಾ. ಮಮತಾ ಕೆ., ಬಿ.ಸಿ.ಎ ವಿಭಾಗ ಮುಖ್ಯಸ್ಥೆ ಹಾಗೂ ಪ್ಲೇಸ್ ಮೆಂಟ್ ಆಫಿಸರ್ ಭವ್ಯ ಮನು ಪೆರುಮುಂಡ ಉಪಸ್ಥಿತರಿದ್ದರು. ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿಯರಾದ ವಿಜೇತ ಬಿ.ಎಸ್. ಹಾಗೂ ದೀಪಿಕಾ ಎ. ಪ್ರಾರ್ಥಿಸಿ, ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಉಜಾನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಉದ್ಯೋಗಾಸಕ್ತ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಉದ್ಯೋಗ ಮೇಳದ ಯಶಸ್ಸಿಗೆ ಉಪನ್ಯಾಸಕರಾದ ದಿವ್ಯಾ ಟಿ ಎಸ್, ಕುಲದೀಪ್ ಪಿ ಪಿ, ವಿಷ್ಣು ಪ್ರಶಾಂತ್ ಬಿ, ಹರಿಪ್ರಸಾದ್ ಎ ವಿ, ಅಶ್ವಿನಿ ಕೆ ಸಿ, ದೀಕ್ಷ ಎಂ ಡಿ, ರಕ್ಷಾ, ನವ್ಯ ಹಾಗೂ ಬೋಧಕೇತರ ಸಿಬ್ಬಂದಿ ಶಿವಾನಂದ ಮತ್ತು ಪವನ್ ಸಹಕರಿಸಿದರು.

See also  ಸಂಪಾಜೆ :ತಡರಾತ್ರಿ ಹೊಟೇಲ್‌ವೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನ,ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಕಳ್ಳರು ಎಸ್ಕೇಪ್ ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget