Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ನೈಟ್‌ ಕ್ಲಬ್‌ ನಲ್ಲಿ ಛಾವಣಿ ಕುಸಿದು 79 ಮಂದಿ ಸಾವು..! ವಿಡಿಯೋ ವೈರಲ್

453

ನ್ಯೂಸ್ ನಾಟೌಟ್: ನೈಟ್‌ ಕ್ಲಬ್‌ ನಲ್ಲಿ ಛಾವಣಿ ಕುಸಿದು ಕನಿಷ್ಠ 79 ಜನರು ಸಾವನ್ನಪ್ಪಿದ್ದು, 155 ಜನರು ಗಾಯಗೊಂಡ ಘಟನೆ ಡೊಮಿನಿಕನ್ ರಿಪಬ್ಲಿಕ್ ದೇಶದ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿ ಕಳೆದ ಮಧ್ಯರಾತ್ರಿ(ಎ.9) ನಡೆದಿದೆ.

ಜೆಟ್ ಸೆಟ್ ನೈಟ್‌ ಕ್ಲಬ್‌ ನಲ್ಲಿ ಸಂಭವಿಸಿದ ದುರಂತದಲ್ಲಿ ಜನಪ್ರಿಯ ಗಾಯಕ, ಪ್ರಾಂತೀಯ ಗವರ್ನರ್ ಮತ್ತು ಇಬ್ಬರು ಮಾಜಿ ಮೇಜರ್ ಲೀಗ್‌ ನ ಬೇಸ್‌ ಬಾಲ್ ಆಟಗಾರರು ಸೇರಿ 79 ಜನ ಮೃತಪಟ್ಟಿದ್ದಾರೆ.

ಡೊಮಿನಿಕನ್ ರಿಪಬ್ಲಿಕನ್‌ ನ ತುರ್ತು ಕಾರ್ಯಾಚರಣೆ ಕೇಂದ್ರದ ಮುಖ್ಯಸ್ಥ ಜುವಾನ್ ಮ್ಯಾನುಯೆಲ್ ಮೆಂಡೆಜ್ ಪ್ರಕಾರ, ಛಾವಣಿ ಕುಸಿತದ ಸಮಯದಲ್ಲಿ ಕ್ಲಬ್ ಒಳಗೆ ಇದ್ದ ಜನರ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಮಧ್ಯರಾತ್ರಿ 12:44 ಕ್ಕೆ ಈ ದುರ್ಘಟನೆ ಸಂಭವಿಸಿದೆ. ಕ್ಲಬ್‌ ನಲ್ಲಿ 500 ರಿಂದ 1,000 ಜನರಿದ್ದರು ಎನ್ನಲಾಗಿದೆ.

ಕ್ಲಬ್‌ ನಲ್ಲಿ 700 ಜನರು ಕುಳಿತುಕೊಳ್ಳುವ ಮತ್ತು ಸುಮಾರು 1,000 ಜನರು ನಿಲ್ಲುವ ಸಾಮರ್ಥ್ಯವನ್ನು ಹೊಂದಿತ್ತು. ಘಟನೆಯ ವೀಡಿಯೋಗಳು ವೈರಲ್ ಆಗಿದೆ. ಮಧ್ಯರಾತ್ರಿಯ ನಂತರ ಛಾವಣಿ ಕುಸಿದಾಗ, ಖ್ಯಾತ ಡೊಮಿನಿಕನ್ ಮೆರೆಂಗ್ಯೂ ಗಾಯಕ ರಬ್ಬಿ ಪೆರೆಜ್ ವೇದಿಕೆಯಲ್ಲಿ ಹಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಜೆಟ್ ಸೆಟ್ ನೈಟ್‌ ಕ್ಲಬ್‌ ನಲ್ಲಿ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳು ಇದ್ದರು. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಗುತ್ತಿದೆ.

ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಘೋಷಣೆ, ಯಾವತ್ತಿನಿಂದ ಆರಂಭ..?

ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಒಂದು ವರ್ಷದಿಂದ ನಿರಂತರ ಅತ್ಯಾಚಾರ..! ಮಗಳು ನೀಡಿದ ದೂರಿನಲ್ಲೇನಿದೆ..?

ಬ್ಯಾಂಕ್ ಗಳ ರೆಪೋ ದರ ಶೇ.6ಕ್ಕೆ ಇಳಿಕೆ..! ಆರ್ ​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾಹಿತಿ

See also  ಮಂಗಳೂರಿನ ಯುವತಿ ಸುಳ್ಯಕ್ಕೆ ಬಂದು ಟ್ಯಾಬ್ಲೆಟ್ ಸೇವನೆ, ತೀವ್ರ ಅಸ್ವಸ್ಥ, ಐಸಿಯುನಲ್ಲಿ ಚಿಕಿತ್ಸೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget