ಕರಾವಳಿ

ಬೆಳ್ಳಂ ಬೆಳಗ್ಗೆ ಪಿಎಫ್‌ಐ ಕಚೇರಿ ಮೇಲೆ ಎನ್‌ಐಎ ದಾಳಿ, ಇಬ್ಬರು ವಶಕ್ಕೆ?

419

ನ್ಯೂಸ್ ನಾಟೌಟ್ : ಎನ್ಐಎ (ರಾಷ್ಟ್ರೀಯ ಭದ್ರತಾ ದಳ) ಬೆಳ್ಳಂ ಬೆಳಗ್ಗೆ ಮಂಗಳೂರಿನಲ್ಲಿ ದಾಳಿ ನಡೆಸಿದೆ. ಮಾತ್ರವಲ್ಲ ಇಬ್ಬರನ್ನು ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.

ಪಿಎಫ್‌ಐ ಐ ಜಿಲ್ಲಾ ಕಚೇರಿ ಸೇರಿದಂತೆ ಹಲವೆಡೆ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ಇದೇ ವೇಳೆ ಪಿಎಫ್ಐ ನಾಯಕರ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮಂಗಳೂರು ಹೊರವಲಯದ ಬಜ್ಪೆ, ಕಾವೂರು, ಪಣಂಬೂರು, ಬಂದರು, ಜೋಕಟ್ಟೆ ಸೇರಿದಂತೆ ಕೆಲವೆಡೆ ರಾಜ್ಯ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿದೆ. ಇದೇವೇಳೆ ಪಣಂಬೂರಿನಲ್ಲಿ ಕಾವೂರಿನಲ್ಲಿ ಕ್ರಮವಾಗಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ನಾಯಕರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆ ಮುಂಭಾಗ ಪಿಎಫ್ಐ ಕಾರ್ಯಕರ್ತರು ಜಮಾಯಿಸಿದ್ದು, ಗೋ ಬ್ಯಾಕ್ ಎನ್ಐಎ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪಿಎಫ್‌ಐ ನಾಯಕ ಅಶ್ರಫ್ ಜೋಕಟ್ಟೆ ಮನೆ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.

See also  ಕೋಮು ಪ್ರಕರಣಗಳಲ್ಲಿ ಸಿಕ್ಕಿಬಿದ್ದವರು, ಪರಾರಿಯಾದವರ ಮೇಲೆ ಪೊಲೀಸರ ಹದ್ದಿನ ಕಣ್ಣು, ಬಾಲ ಬಿಚ್ಚಿ ತಗ್ಲಾಕ್ಕೊಂಡ್ರೆ ಸಂಕಷ್ಟ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget