ಕರಾವಳಿ

ದಕ್ಷಿಣ ಕನ್ನಡ ಸೇರಿದಂತೆ 5 ರಾಜ್ಯಗಳ 14 ಸ್ಥಳಗಳಲ್ಲಿ ಏಕಕಾಲಕ್ಕೆ NIA ದಾಳಿ, PFI ಮಾಡಿದ ಆ ಪ್ಲಾನ್ ಬಹಿರಂಗಗೊಂಡಿದ್ದು ಹೇಗೆ..?

222

ಬೆಂಗಳೂರು: ಕರ್ನಾಟಕ ಸೇರಿದಂತೆ ಇತರೆ 5 ರಾಜ್ಯಗಳ 14 ಸ್ಥಳಗಳಲ್ಲಿ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಎಫ್ ಐ ಹಾಗೂ ಇತರೆ ಸಂಘಟನೆಗಳು ಉಗ್ರ ಚಟುವಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆ ಭಾಗಿಯಾಗಿರುವ ಶಂಕೆಯಲ್ಲಿ ಎನ್​ಐಎ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ 2047ರೊಳಗೆ ಪಿಎಫ್ ಐ ಆರ್ಮಿ ಸ್ಥಾಪಿಸಲು ಮುಂದಾಗಿರುವ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ದಕ್ಷಿಣ ಕನ್ನಡ , ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳಲ್ಲಿ ಎನ್​ಐಎ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಶಸ್ತ್ರಾಸ್ತ್ರ ತರಬೇತಿ‌, ಐರನ್ ರಾಡ್ಸ್ , ಕತ್ತಿಗಳ ತರಬೇತಿ ನೀಡಿದ ಬಗ್ಗೆ ಮಾಹಿತಿ ಹಿನ್ನಲೆ ಕೆಲ ಪಿಎಫ್​ಐ ಏಜೆಂಟ್​ಗಳನ್ನ ಎನ್​ಐಎ ಬಂಧಿಸಿತ್ತು. ಅಲ್ಲದೇ ಈ ಹಿಂದೆ ಪಿಎಫ್ಐನ 19 ಜನರ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆ ಮಾಡಿತ್ತು. ಇವರ ತನಿಖೆ ವೇಳೆ ಯುವಕರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಿ‌ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಎನ್​ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

See also  ಕರಾವಳಿಯ ಹುಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಅದ್ದೂರಿ ಸ್ವಾಗತ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget