ಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್

ನಾಪತ್ತೆಯಾಗಿದ್ದ ಮಗು ಪಕ್ಕದ ಮನೆಯ ವಾಷಿಂಗ್ ಮೆಷಿನ್ ನಲ್ಲಿ ಶವವಾಗಿ ಪತ್ತೆ..! ಆ ಮಹಿಳೆಗೆ 3 ವರ್ಷದ ಮಗುವಿನ ಮೇಲೆ ಅದೆಂಥಾ ದ್ವೇಷ..?

ನ್ಯೂಸ್‌ ನಾಟೌಟ್‌: ಮನೆಯ ಮುಂದೆ ಆಟವಾಡುತ್ತಿದ್ದ 3 ವರ್ಷದ ಮಗು ಇದ್ದಕ್ಕಿದಂತೆ ನಾಪತ್ತೆಯಾಗಿದ್ದು ಇದೀಗ ಮಗುವಿನ ಶವ ಪಕ್ಕದ ಮನೆಯ ವಾಷಿಂಗ್ ಮೆಷಿನ್ ನಲ್ಲಿ ಪತ್ತೆಯಾದ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂನಲ್ಲಿ ನಡೆದಿದೆ. ಸೋಮವಾರ (ಸೆ.9) ಘಟನೆಗೆ ಸಂಬಂಧಿಸಿ ನೆರೆಮನೆಯ ತಂಕಮ್ಮಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಘ್ನೇಶ್ ಮತ್ತು ರಮ್ಯಾ ಎಂಬ ದಂಪತಿಯ ಪುತ್ರನಾದ ಸಂಜಯ್ ನೆರೆಮನೆಯ ಮಹಿಳೆಯ ಕೃತ್ಯದಿಂದ ಜೀವಕಳೆದುಕೊಂಡ ಮಗು ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ ಸುಮಾರು 9.30 ರ ಹೊತ್ತಿಗೆ ಸಂಜಯ್ ಅಂಗನವಾಡಿಗೆ ಹೊರಡಲು ತಯಾರಾಗಿ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ತಾಯಿ ಮನೆಯೊಳಗೆ ಕೆಲಸ ಮಾಡಿಕೊಂಡಿದ್ದು ಬಳಿಕ ಮಗುವನ್ನು ಅಂಗನವಾಡಿಗೆ ಕಳುಹಿಸಲು ಮನೆಯ ಹೊರಗೆ ಬಂದಿದ್ದಾರೆ, ಆದರೆ ಮನೆಯ ಹೊರಗೆ ಆಟವಾಡುತ್ತಿದ್ದ ಸಂಜಯ್ ಎಲ್ಲೂ ಕಾಣಲಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಂಜಯ್ ಪತ್ತೆಯಾಗಲಿಲ್ಲ.

ಬಳಿಕ ಗಾಬರಿಗೊಂಡ ಮಹಿಳೆ ಗಂಡನಿಗೆ ವಿಚಾರ ತಿಳಿಸಿದ್ದಾರೆ ಗಂಡ ಕೂಡಲೇ ಮನೆಗೆ ಬಂದು ಎಲ್ಲ ಕಡೆ ಹುಡುಕಾಡಿದ್ದಾರೆ ಆದರೂ ಎಲ್ಲೂ ಪತ್ತೆಯಾಗಲಿಲ್ಲ. ಬಳಿಕ ಪೋಷಕರು ಪಕ್ಕದ ಪೊಲೀಸ್ ಠಾಣೆಗೆ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಕುಟುಂಬಕ್ಕೆ ಯಾರ ಮೇಲಾದರೂ ಅನುಮಾನ ಇದೆಯಾ ಎಂದು ಕೇಳಿದ್ದಾರೆ ಆಗ ಪೋಷಕರು ಪಕ್ಕದ ಮನೆಯ ಮಹಿಳೆಯ ಮೇಲೆ ಅನುಮಾನ ಇದೆ ಎಂದು ಹೇಳಿಕೊಂಡಿದ್ದಾರೆ (ಈ ಹಿಂದೆ ಜಾಗದ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳಗಳು ನಡೆದಿತ್ತು) ಅದರಂತೆ ಪೊಲೀಸರು ನೆರೆಮನೆಯಲ್ಲಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ಮನೆಯಲ್ಲಿದ್ದ ಆರೋಪಿ ತಂಕಮ್ಮ ತನಗೇನು ಗೊತ್ತಿಲ್ಲ ಎಂಬಂತೆ ನಟಿಸಿದ್ದಾಳೆ. ಪೊಲೀಸರು ಮನೆಯ ಒಳಗೆ ಹುಡುಕಾಟ ನಡೆಸುವ ವೇಳೆ ಗಾಬರಿಗೊಂಡ ತಂಕಮ್ಮ ಮನೆಯಿಂದ ಹೊರ ಓಡಿ ಹೋಗಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು ಮನೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ವೇಳೆ ಮನೆಯೊಳಗಿದ್ದ ವಾಷಿಂಗ್ ಮೆಷಿನ್ ಒಳಗೆ ಬಟ್ಟೆಯಿಂದ ಸುತ್ತಿದ ರೀತಿಯಲ್ಲಿ ಸಂಜಯ್ ಮೃತದೇಹ ಪತ್ತೆಯಾಗಿದೆ. ಪೊಲೀಸರು ತಕ್ಷಣ ಬೆನ್ನಟ್ಟಿ ಮಹಿಳೆಯನ್ನು ಬಂಧಿಸಿದ್ದಾರೆ. ನೈಜ್ಯ ಕಾರಣ ತನಿಖೆಯ ಬಳಿಕ ತಿಳಿಯಬೇಕಿದೆ.

Click

https://newsnotout.com/2024/09/darshan-thugudeepa-charge-sheet-kannada-news-highcourt-kannada-news/
https://newsnotout.com/2024/09/kananda-news-viral-news-video-cctv-fixed-on-the-doubter-head/
https://newsnotout.com/2024/09/darshan-thugudeepa-kannada-news-charge-sheet-leakage-bengaluru/
https://newsnotout.com/2024/09/iphone-16-and-pro-released-kannada-news-viral-news-technology/
https://newsnotout.com/2024/09/darshan-kannada-news-charge-sheet-kannada-news-shubha-poonja-and-ragini/#google_vignette
https://newsnotout.com/2024/09/railway-incident-kannada-news-gas-cylinder-kannada-news/
https://newsnotout.com/2024/09/rameshwaram-cafe-kannada-news-viral-news-nia-case-court/

Related posts

ಬಿಳಿನೆಲೆ: ಮನೆ ಮಂದಿಯ ಮುಂದೆಯೇ ಇಲಿ ಪಾಷಾಣ ತಿಂದು ಸಾವು

ಮಂಗಳೂರು: ಕುತ್ತಾರಿನಲ್ಲಿ ಅಕ್ರಮ ಗೋ ಸಾಗಾಟಗಾರರ ವಾಹನ ಜಖಂ! ಬಜರಂಗದಳ ಯುವಕರಿಂದ ಜಾನುವಾರುಗಳ ರಕ್ಷಣೆ

ಸುಳ್ಯ: ಓವರ್‌ಟೇಕ್‌ ಭರದಲ್ಲಿ ನಿಲ್ಲಿಸಿದ್ದ ಓಮ್ನಿಗೆ ಡಿಕ್ಕಿ ಹೊಡೆದ ಕಾರು..!ಸ್ಥಳಕ್ಕಾಗಮಿಸಿದ ಪೊಲೀಸರು