ವಿಡಿಯೋವೈರಲ್ ನ್ಯೂಸ್

ಕಾಡಿನ ರಾಜ ನಾಡಿಗೆ: ಬೀದಿನಾಯಿಗಳಿಗೆ ಹೆದರಿ ಓಡಿದ ಸಿಂಹ! ವಿಡಿಯೋ ವೈರಲ್

402

ನ್ಯೂಸ್‌ ನಾಟೌಟ್: ಕಾಡಿನ ರಾಜ ಸಿಂಹವು ಕಾಡಿನಲ್ಲಿ ವಿವಿಧ ಪ್ರಾಣಿಗಳನ್ನು ದಾಳಿ ಮಾಡಿ ತಿಂದು ತೇಗುತ್ತದೆ. ಕಾಡಿನಲ್ಲಿ ತನ್ನದೇ ಸಾಮ್ರಾಜ್ಯವನ್ನು ನಡೆಸುವ ಸಿಂಹಕ್ಕೆ ಬೇರೆ ಯಾವ ಪ್ರಾಣಿಗಳಿಗೂ ಹೆದರುವುದಿಲ್ಲ ಎಲ್ಲರೂ ಅಂದು ಕೊಳ್ಳುತ್ತೇವೆ. ಆದೇ ರಾಜ ನಾಡಿಗೆ ಬಂದರೇ ಹೆದರುಪುಕ್ಕಲನಾದ ಎಂಬುದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ.

ಹೌದು ಸಿಂಹವು ತಡರಾತ್ರಿ ಬೀದಿಯಲ್ಲಿ ರಾಜಾರೋಷವಾಗಿ ಬರುತ್ತಿರುವಾಗ ಬೀದಿನಾಯಿಗಳ ಗುಂಪು ಸಿಂಹವನ್ನು ಅಟ್ಟಾಡಿಸಿ ಓಡಿಸಿರುವ ಘಟನೆ ಗುಜರಾತ್ ನ ಗಿರ್ ಸೋಮನಾಥ್ ಗ್ರಾಮವೊಂದರಲ್ಲಿ ನಡೆದಿದೆ. ತಡರಾತ್ರಿ ಸಿಂಹವೊಂದು ಬಂದಿದ್ದು, ಅದು ರಸ್ತೆಯಲ್ಲಿ ತಿರುಗಾಡುತ್ತಿದ್ದ ವೇಳೆ ನಾಯಿಗಳ ಗುಂಪು “ಕಾಡಿನ ರಾಜ”ನನ್ನು ಬೆನ್ನಟ್ಟಿ ಓಡಿಸಿದ್ದು, ಸಿಂಹ ಕಾಲ್ಕಿತ್ತಿರುವ ವಿಡಿಯೋ ವೈರಲ್ ಆಗಿದೆ.

ಐಎಫ್ ಎಸ್ ಅಧಿಕಾರಿ ಸುರೇಂದ್ರ ಮೆಹ್ರಾ ಅವರು ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ವಿಡಿಯೋದಲ್ಲಿ ಭೂ ಗಡಿ ಪ್ರದೇಶದ ಬಗ್ಗೆ ಉಲ್ಲೇಖಿಸಿ, ಪ್ರಾಣಿಗಳು ಕೂಡಾ ತಮ್ಮ ಪ್ರದೇಶವನ್ನು ಹೇಗೆ ರಕ್ಷಿಸಿಕೊಳ್ಳುತ್ತಿವೆ ಎಂಬುನ್ನು ತಿಳಿಸಿದ್ದಾರೆ.

See also  ಗೋಳಿತೊಟ್ಟು: ನೈಲನ್ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಯುವಕ, ತಂದೆಯ ಸಾವಿಗೆ ಮನನೊಂದು ಕೃತ್ಯ ಎಸಗಿದನೇ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget