ವಿಡಿಯೋವೈರಲ್ ನ್ಯೂಸ್

ಬೈಕ್ ಸವಾರನ ತಲೆ ಮೇಲೆ ಚಲಿಸುತ್ತಿದ್ದಾಗ ಬಿತ್ತು ತೆಂಗಿನಕಾಯಿ! ಇಲ್ಲಿದೆ ವೈರಲ್ ವಿಡಿಯೋ

148

ನ್ಯೂಸ್ ನಾಟೌಟ್ : ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರು ಒಂದೊಮ್ಮೆ ಅಪಘಾತ ಸಂಭವಿಸಿದರೆ ತಮ್ಮ ತಲೆಯನ್ನು ಸುರಕ್ಷಿತವಾಗಿ ಕಾಪಾಡಲು ಹೆಲ್ಮೆಟ್ ಧರಿಸುವಂತೆ ಸೂಚಿಸಲಾಗುತ್ತದೆ. ಹಲವು ಬಾರಿ ದ್ವಿಚಕ್ರ ವಾಹನ ಚಾಲಕರು ಕೇವಲ ಪೇಟೆಯ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸಿದರೆ ಸಾಕು ಎಂದುಕೊಳ್ಳುವವರೆ ಹೆಚ್ಚು. ಆದರೆ ಇಲ್ಲಿ ವೈರಲ್ ಆಗಿರೋ ವಿಡಿಯೋ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ನ ಮಹತ್ವವನ್ನು ಸಾರಿ ಹೇಳಿದಂತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಬೈಕ್​ಲ್ಲಿ ಹೋಗುವಾಗ ಎದುರಿನಿಂದ ಬರುವ ವಾಹನಗಳನ್ನು ಚಿತ್ರೀಕರಿಸಿದ್ದಾರೆ. ಬೈಕ್ ಸವಾರರೊಬ್ಬರು ಅವರ ಎದುರಿನಿಂದ ಬರುತ್ತಿರುತ್ತಾರೆ ಆಗ ಅದೇ ಸಮಯದಲ್ಲಿ ಬೈಕ್ ಸವಾರನ ತಲೆ ಮೇಲೆ ತೆಂಗಿನ ಕಾಯಿ ಬೀಳುತ್ತದೆ. ಇದರಿಂದ ಬೈಕ್ ಸವಾರನ ತಲೆಗೆ ಪೆಟ್ಟಾಗಿದ್ದು, ನಿಯಂತ್ರಣ ತಪ್ಪಿ ಅಪಘಾತಕ್ಕೆ ಬಲಿಯಾಗಿದ್ದಾನೆ ಎನ್ನಲಾಗಿದೆ.

ತಲೆಗೆ ಹೆಲ್ಮೆಟ್ ಹಾಕದ ಕಾರಣ ಬೈಕ್ ಸವಾರ ಅಪಘಾತಕ್ಕೀಡಾಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

See also  ನಟ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು..! ದಾಸನಿಗೆ ದೀಪಾವಳಿ ಗಿಫ್ಟ್..?
  Ad Widget   Ad Widget   Ad Widget   Ad Widget   Ad Widget   Ad Widget