ದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ಕರಡಿಯೊಂದು ಮೀನು ಹಿಡಿಯುವ ಕಲೆಗೆ ಫಿದಾ ಆದ ಆನಂದ್ ಮಹೀಂದ್ರ! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಹಲವು ಬಾರಿ ಪ್ರಾಣಿಗಳು ಮನುಷ್ಯರಿಂದ ಅಸಾಧ್ಯ ಎನಿಸುವ ಸೂಕ್ಷ್ಮ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತವೆ. ಪ್ರಕೃತಿಯೇ ಗುರು ಎಂಬುದಕ್ಕೆ ಹಲವು ಬಾರಿ ಸಾಕ್ಷಿಗಳು ದೊರೆಯುತ್ತವೆ. ಇಲ್ಲೊಂದು ಕರಡಿ ತಾಳ್ಮೆಯಿಂದ ಕಾದು ಒಂದೇ ಹಿಡಿತಕ್ಕೆ ಮೀನು ಹಿಡಿದ ಅದರ ಏಕಾಗ್ರತೆಗೆ ಆನಂದ್ ಮಹೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದರಲ್ಲಿ ನಾವು ಕಲಿಯಬಹುದಾದ ಪಾಠದ ಬಗ್ಗೆ ತಿಳಿಸಿ ವಿಡಿಯೋ ಹಂಚಿಕೊಂಡಿದ್ದಾರೆ.

ಕಂದು ಬಣ್ಣದ ಕರಡಿಯೊಂದು ಮತ್ಸ್ಯ ಬೇಟೆಯಲ್ಲಿ ತೊಡಗಿರುವ ದೃಶ್ಯ ವಿಶೇಷವಾಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಭಸವಾಗಿ ನೀರು ಹರಿಯುತ್ತಿರುವ ಜಾಗದಲ್ಲಿ ಕಂದು ಕರಡಿಯೊಂದು ಕುಳಿತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ.

ಬಹಳ ತಾಳ್ಮೆಯಿಂದಲೇ ದಡದಲ್ಲಿ ಕುಳಿತಿದ್ದ ಕರಡಿ ಒಂದು ಹಂತದಲ್ಲಿ ನೀರಿನೊಳಗೆ ತಲೆ ಹಾಕಿ ದೊಡ್ಡ ಮೀನೊಂದನ್ನು ಕಚ್ಚಿಕೊಂಡು ಮೇಲೆ ಬಂದಿದೆ. ಕರಡಿಯ ಈ ಬೇಟೆಯ ಶೈಲಿ ವಿಶಿಷ್ಠವಾಗಿದೆ. ಈ ವಿಡಿಯೋ ನಮಗೂ ಜೀವನ ಪಾಠ ಕಲಿಸುತ್ತದೆ. ತಾಳ್ಮೆ, ಏಕಾಗ್ರತೆಗೆ ಇದು ಉದಾಹರಣೆ. `ಧ್ಯಾನ, ಏಕಾಗ್ರತೆಯಿಂದ ಏನನ್ನೂ ಒಂದೇ ಪ್ರಯತ್ನದಿಂದ ಸಾಧಿಸಬಹುದು ಎಂದು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.

Related posts

ಇನ್ನು ಮುಂದೆ ಅಗತ್ಯ ಮೆಡಿಸನ್‌ ಗಳು ದುಬಾರಿ..! ಈ ಬಗ್ಗೆ ಔಷಧಿ ಕಂಪನಿಗಳು ನೀಡಿರುವ ಕಾರಣಗಳೇನು..?

ಸುಳ್ಯ: ಕಂಠಪೂರ್ತಿ ಕುಡಿದು ವಲಸೆ ಕಾರ್ಮಿಕರ ಬೀದಿ ರಂಪ..! ಪೊಲೀಸರು ಬಂದ ಕೂಡಲೇ ಹೆದರಿ ನಿಂತ ಲಾರಿಯ ಅಡಿಗೆ ನುಗ್ಗಿದ ಭೂಪ..!

ವಿಕಲಚೇತನ ವ್ಯಕ್ತಿಯನ್ನು ಮಗುವಿನಂತೆ ಎತ್ತಿಕೊಂಡು ಬೇರೊಂದು ಬಸ್‌ ಗೆ ಹತ್ತಿಸಿದ ಕಂಡಕ್ಟರ್, ಮಾನವೀಯತೆ ಕಂಡು ಕರಗಿದ ಜನ