ನ್ಯೂಸ್ ನಾಟೌಟ್ : ಪತಿ ನೋಯೆಲ್ ಪೇನ್‌ನ ಉಪಟಳದಿಂದ ಬೇಸತ್ತಿದ್ದ ಪತ್ನಿ ರೆಬೆಕಾ ಪೇನ್ ಹೊಸ ಪ್ಲಾನ್ ಮಾಡಿದ್ದು ಈಗ ಇಕ್ಕಟ್ಟಿಗೆ ಸಿಲುಕಿದ್ದಾಳೆ. ಪತಿ ದೀರ್ಘಕಾಲ ನಿದ್ರೆ ಮಾಡಲಿ ಎಂದು ಟೆಮಾಜೆಪಮ್ ಎಂಬ ನಿದ್ದೆ ಮಾತ್ರೆಯನ್ನು ಪತಿ ನೋಯೆಲ್ ಪೇನ್‌ಗೆ ನೀಡುತ್ತಿದ್ದರು ಅದು ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ, ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ನಡೆದಿದೆ ಎನ್ನಲಾಗಿದೆ.
ಬಿಸ್ಕತ್ತುಗಳ ಐಸಿಂಗ್‌ನಲ್ಲಿ ಟೆಮಾಜೆಪಮ್ ಅನ್ನು ಸೇರಿಸುತ್ತಿದ್ದು ಅದನ್ನು ಅವರು ಮಿಲೋ ಕಪ್‌ನೊಂದಿಗೆ ನೀಡಿದರು. ಆದರೆ ಮಿತಿಮೀರಿದ ಡೋಸೆಜ್ ಪರಿಣಾಮವಾಗಿ ಪತಿ ಮರಣ ಹೊಂದಿದ್ದು ಗಾಬರಿಯಾದ ರೆಬೆಕಾ ಪತಿಯ ದೇಹವನ್ನು ಫ್ರೀಜರ್‌ಗೆ ಸ್ಥಳಾಂತರಿಸಿದ್ದು ತನಿಖೆಯ ಸಂದರ್ಭದಲ್ಲಿ ಈ ವಿಷಯ ಹೊರಬಿದ್ದಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಸಣ್ಣ ಪಟ್ಟಣವಾದ ವಾಲ್ಪಪ್‌ನಲ್ಲಿರುವ ಅವರ ಮನೆಯಲ್ಲಿ ಶವವನ್ನು ಮುಚ್ಚಿದ್ದಾರೆ.
ತನ್ನ ಪತಿಯನ್ನು ಕೊಲ್ಲುವ ಉದ್ದೇಶ ಹೊಂದಿರಲಿಲ್ಲ ಆದರೆ ನಿದ್ದೆ ಮಾತ್ರೆಗಳಿರುವ ಬಿಸ್ಕತ್‌ಗಳನ್ನು ತಿಂದ ನಂತರ ಆತ ಪ್ರಜ್ಞೆ ತಪ್ಪಿ ಬಿದ್ದನು ಇದರಿಂದ ಭಯಭೀತಳಾದೆ ಎಂದು ರೆಬೆಕಾ ತಿಳಿಸಿದ್ದಾರೆ.
ಶವಪರೀಕ್ಷೆ ನಡೆಸಿದ ವೈದ್ಯರಿಗೆ ಸಾವು ಹೇಗೆ ಸಂಭವಿಸಿದೆ ಎಂಬುದು ಕಗ್ಗಂಟಾಗಿದ್ದು, ನಿದ್ದೆಮಾತ್ರೆಯ ಮಿತಿಮೀರಿದ ಸೇವನೆ ಆತನ ಮರಣಕ್ಕೆ ಕಾರಣವಾಗಿದೆಯೇ? ಫ್ರೀಜರ್‌ನಲ್ಲಿ ಮೃತದೇಹವನ್ನು ಇರಿಸಿದ್ದರಿಂದ ಉಸಿರುಗಟ್ಟಿ ಆತ ಮರಣಹೊಂದಿದ್ದಾನೆಯೇ ಎಂಬುದು ತಿಳಿದುಬಂದಿಲ್ಲ.