ಕರಾವಳಿಸುಳ್ಯ

ಸುಳ್ಯ: ಸ್ಕೂಟರ್ ಗೆ ಹಿಂಬದಿಯಿಂದ ಗುದ್ದಿದ ಕಾರು, ಸವಾರ ಗಂಭೀರ

ನ್ಯೂಸ್ ನಾಟೌಟ್ : ಮಡಿಕೇರಿ ಕಡೆಯಿಂದ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಗಾಯಾಳು ವ್ಯಕ್ತಿಯನ್ನು ಸುಳ್ಯದ ವಿಷ್ಣುಸರ್ಕಲ್ ಬಳಿ ಅವಿಲ್ ಮಿಲ್ಕ್ನ ವ್ಯಾಪಾರಸ್ಥ ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತನ್ನ ಅಂಗಡಿಗೆ ಅವಿಲ್ ಮಾಡಲು ಬಾಳೆಗೊನೆಯನ್ನು ಸ್ಕೂಟರ್ ನಲ್ಲಿ ಹೇರಿಕೊಂಡು ಬರುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ವೇಳೆ ಇಟಿಯೋಸ್ ಕಾರು ಹಿಂದಿನಿಂದ ಬಂದು ಸ್ಕೂಟರ್ ಗೆ ಡಿಕ್ಕಿಯಾಗಿದೆ. ಸ್ಕೂಟರ್ ಸವಾರನನ್ನು ಸುಮಾರು 15 ಮೀಟರ್ ದೂರಕ್ಕೆ ಎಳೆದೊಯ್ದಿದೆ ಎನ್ನಲಾಗಿದೆ. ಸ್ಕೂಟರ್ ಸವಾರ ಅವಿಲ್ ಮಿಲ್ಕ್ ತಯಾರಿಸುವುದರಲ್ಲಿ ಚಾಣಾಕ್ಷರಾಗಿದ್ದರು.

Related posts

ಮಂಗಳೂರು: 3 ಯುವತಿಯರ ಮೃತದೇಹ ಪೋಷಕರಿಗೆ ಹಸ್ತಾಂತರ, ರೆಸಾರ್ಟ್ ಮಾಲಕ ಮತ್ತು ಮ್ಯಾನೇಜರ್ ಅರೆಸ್ಟ್..!

ಪ್ರೇಮ ವಿವಾಹವಾಗಿದ್ದ ಮನೆ ಮಗಳನ್ನು ಹುಡುಗನ ಮನೆಗೆ ನುಗ್ಗಿ ಅಪಹರಿಸಿದ ಗ್ಯಾಂಗ್! ಏನಿದು ಕೇರಳ ಕರ್ನಾಟಕ ನಡುವಿನ ಪ್ರೇಮ ದಂಗಲ್!

ಸುಳ್ಯ : ಅಲೋಶಿಯನ್ ಫೆಸ್ಟ್ ನಲ್ಲಿ ಎನ್ನೆoಪಿಯುಸಿಗೆ ಬಹುಮಾನ, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ