ವೈರಲ್ ನ್ಯೂಸ್ಸುಳ್ಯ

ಏ11ರಿಂದ ಪೆರಾಜೆಯಲ್ಲಿ ಈಜೋಣ ಬನ್ನಿ.. ರಜೆಯ ಮಜಾ ಅನುಭವಿಸಲು ಇದು ಸಕಾಲ..!

190

ನ್ಯೂಸ್ ನಾಟೌಟ್: ಮಕ್ಕಳಿಗೆ ಬೇಸಿಗೆ ರಜೆ ಬಂತೆಂದರೆ ಪೋಷಕರಲ್ಲೇ ಮಕ್ಕಳನ್ನ ಎಲ್ಲಿಗೆ ಶಿಬಿರಕ್ಕೆ ಹಾಕೋದು ಅಂತ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಅಂತಹ ಯೋಚನೆಯಲ್ಲಿರುವ ಪೋಷಕರಿಗೆ ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಮತ್ತು ಚಿಗುರು ಯುವಕ ಮಂಡಲ ಪೆರಾಜೆ ಇದರ ಆಶ್ರಯದಲ್ಲಿ ಈಜು ತರಬೇತಿ ಶಿಬಿರ ಆಯೋಜಿಸಲಾಗಿದೆ.

ಏಪ್ರಿಲ್ 11ರಿಂದ ತರಬೇತಿ ಆರಂಭಗೊಳ್ಳಲಿದೆ. ಒಟ್ಟು 10 ದಿನಗಳ ತರಬೇತಿ ಶಿಬಿರ ಇದಾಗಿದೆ. ಪ್ರತಿ ದಿನ ಬೆಳಗ್ಗೆ 11ರಿಂದ 12.30 ರ ತನಕ ಪರಾಜೆಯ ಪಯಸ್ವಿನಿ ಸೇತುವೆಯ ಬಳಿ ತರಬೇತಿ ನಡೆಯಲಿದೆ. 6 ವರ್ಷದಿಂದ ಮೇಲ್ಪಟ್ಟವರು ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸುರೇಶ್ ಪೆರುಮುಂಡ (9448409564), ಭುವನ್ ಕುಂಬಳಚೇರಿ (8762195187), ಯುವಾನಂದ ಪೆರಂಗಜೆ (9448768830), ಜೀವನ್ ಮಜಿಕೋಡಿ (7259898368) ಅವರನ್ನು ಸಂಪರ್ಕಿಸಬಹುದಾಗಿದೆ.

See also  ಸುಳ್ಯ: ಶ್ರೀರಾಮ ಮಂದಿರದ ಲೋಕಾರ್ಪಣೆಯಲ್ಲಿ ರಾಮತಾರಕ ಮಂತ್ರ, ಜಯ ನಗರದಲ್ಲಿ ರಾಮ ಯಜ್ಞ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget