ಕ್ರೈಂವೈರಲ್ ನ್ಯೂಸ್

ಸುಮಾರು 1 ಗಂಟೆ ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌ ಸ್ಥಗಿತವಾಗಿ 24,871 ಕೋಟಿ ರೂಪಾಯಿ ನಷ್ಟ..! ಈ ಬಗ್ಗೆ ಮೆಟಾ ಹೇಳಿದ್ದೇನು..?

ನ್ಯೂಸ್ ನಾಟೌಟ್: ಮೆಟಾ ಸಂಸ್ಥೆಯ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂ ಇವುಗಳು ಮಂಗಳವಾರ(ಮಾರ್ಚ್ 6) ಒಂದು ಗಂಟೆ ಕಾಲ ಎದುರಿಸಿದ ಜಾಗತಿಕ ಸ್ಥಗಿತದ ನಂತರ ಒಂದೇ ದಿನದಲ್ಲಿ ಮೆಟಾ ಸಿಇಒ ಮಾರ್ಕ್‌ ಝುಕರ್ ಬರ್ಗ್‌ ಅವರು 3 ಬಿಲಿಯನ್‌ ಡಾಲರ್‌ (ಸುಮಾರು 24,871 ಕೋಟಿ ರೂ.) ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ನಲ್ಲಿ ಝುಕರ್ ಬರ್ಗ್‌ ಅವರ ಒಟ್ಟು ಸಂಪತ್ತು ಒಂದು ದಿನದಲ್ಲಿ 2.79 ಬಿಲಿಯನ್‌ ಡಾಲರ್‌ ಇಳಿಕೆಯಾಗಿ 176 ಬಿಲಿಯನ್‌ ಡಾಲರ್‌ಗೆ ತಲುಪಿದೆ. ಒಂದು ಗಂಟೆ ಕಾಲ ಇದ್ದ ಜಾಗತಿಕ ಸ್ಥಗಿತದಿಂದಾಗಿ ಮೆಟಾ ಷೇರುಗಳ ಮೌಲ್ಯವೂ ಶೇ 1.6ರಷ್ಟು ಕುಸಿತ ಕಂಡು ಝುಕರ್ ಬರ್ಗ್‌ ಅವರ ಸಂಪತ್ತಿನ ಮೌಲ್ಯದಲ್ಲಿ ಇಳಿಕೆಗೆ ಕಾರಣವಾಯಿತು. ಮಂಗಳವಾರದ ಟ್ರೇಡಿಂಗ್‌ ಅವಧಿ ವಾಲ್‌ಸ್ಟ್ರೀಟ್‌ನಲ್ಲಿ ಅಂತ್ಯವಾಗುವ ವೇಳೆ ಮೆಟಾ ಷೇರು ಬೆಲೆ 490.22 ಆಗಿತ್ತು ಎನ್ನಲಾಗಿದೆ.

Related posts

ಕೈದಿಯ ಜೊತೆ ಮಹಾಕಾಳಿಯ ದರ್ಶನಕ್ಕೆ ತೆರಳಿದ ಪೊಲೀಸರು..! ಕೈದಿಯ ಕೈ ಹಿಡಿದ ಕಾಳಿ..! ಜನಜಂಗುಳಿಯಲ್ಲಿ ಕೊಲೆ ಆರೋಪಿ ಪರಾರಿ..!

ಶಾಲಾ ಆವರಣದಲ್ಲೇ ಆತ್ಮಹತ್ಯೆಗೆ ಶರಣಾದ 8ನೇ ತರಗತಿ ವಿದ್ಯಾರ್ಥಿ

ಹೊಲದಲ್ಲಿ ಮನುಷ್ಯರಂತೆ ಬೆಳೆ ಕೊಯ್ಲು ಮಾಡುತ್ತಿರುವ ರೋಬೋಟ್..! ಇಲ್ಲಿದೆ ವೈರಲ್ ವಿಡಿಯೋ