ನ್ಯೂಸ್ ನಾಟೌಟ್ :ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಯೋರ್ವ ನಿದ್ರೆಗೆ ಜಾರಿದ್ದು ಈತ ಇದ್ದಾನೆಂದು ಮರೆತು ಶಿಕ್ಷಕನೋರ್ವ ಶಾಲೆಗೆ ಬೀಗ ಹಾಕಿ ಮನೆಗೆ ತೆರಳಿರುವ ಘಟನೆ ಬಗ್ಗೆ ವರದಿಯಾಗಿದೆ. ಜವಾಬ್ದಾರಿಯಿಂದ ವರ್ತಿಸಬೇಕಾದ ಶಿಕ್ಷಕನಿಗೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇಂತಹ ಘಟನೆ ನಡೆದಿರೋದು ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಲಿಂಗಾಲದಲ್ಲಿ.
ನಾಗರ್ ಕರ್ನೂಲ್ ಜಿಲ್ಲೆಯ ಲಿಂಗಾಲ ಮಂಡಲದ ಸೈನ್ ಪೇಟಾ ಪ್ರಾಥಮಿಕ ಶಾಲೆಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು ಇಲ್ಲಿಯ ಒಂದನೇ ತರಗತಿಯ ವಿದ್ಯಾರ್ಥಿ ಶರತ್ ಎಂಬಾತ ನಿದ್ರೆಗೆ ಜಾರಿದ್ದಾನೆ.ತರಗತಿ ಮುಗಿದು ವಿದ್ಯಾರ್ಥಿಗಳೆಲ್ಲರೂ ಮನೆಗೆ ತೆರಳಿದ್ದು ಕೊನೆಗೆ ಶಾಲೆಯ ಶಿಕ್ಷಕ ತರಗತಿಯ ಕೊಠಡಿಗಳಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ.
ಶರತ್ ದಿನಾಲೂ ಮಧ್ಯಾಹ್ನ 3:30ಕ್ಕೆ ಮನೆಗೆ ಬರುತ್ತಿದ್ದ ಅಂದು 4 ಗಂಟೆ ಕಳೆದರೂ ಮನೆಗೆ ಬರಲಿಲ್ಲ. ಕಾರಣ ಏನು ಎಂದು ತಿಳಿದು ಗಾಬರಿಗೊಂಡ ಬಾಲಕನ ತಂದೆ ಮಲ್ಲೇಶ್ ಶಾಲೆಯ ಕಡೆಗೆ ಬಾಲಕನನ್ನು ಹುಡುಕಿಕೊಂಡು ತೆರಳಿದ್ದಾರೆ. ಆದರೆ ಎಲ್ಲೂ ಬಾಲಕನ ಪತ್ತೆಯಾಗಲಿಲ್ಲ, ಕೊನೆಗೆ ಬಾಲಕನ ತರಗತಿಯ ಕಿಟಕಿಯ ಬಾಗಿಲು ತೆರೆದು ನೋಡಿದಾಗ ಬಾಲಕ ಒಳಗೆ ಪತ್ತೆಯಾಗಿದ್ದಾನೆ. ಬಳಿಕ ಅಲ್ಲೇ ಇದ್ದ ಕಲ್ಲಿನಿಂದ ಕೊಠಡಿಯ ಬೀಗ ಮುರಿದು ಮಗನನ್ನು ಹೊರಗೆ ಕರೆತಂದಿದ್ದಾರೆ.ಅಂತು ಮಗು ಸೇಫಾಗಿ ಮನೆ ಸೇರಿದೆ.ಶಿಕ್ಷಕನ ಎಡವಟ್ಟಿನಿಂದಾಗಿ ಏನೆಲ್ಲಾ ಅವಾಂತರಗಳಾಗುತ್ತವೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್ ಎಕ್ಸಾಂಪಲ್ ..