ಕ್ರೈಂಸುಳ್ಯ

‘ನ್ಯೂಸ್ ನಾಟೌಟ್’ ಹೆಸರಲ್ಲಿ ‘ಸುಳ್ಳು ಸುದ್ದಿ’ ಹಬ್ಬಿಸುತ್ತಿರುವ ಕಿಡಿಗೇಡಿಗಳು..! ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹುಷಾರ್..!

267

ನ್ಯೂಸ್ ನಾಟೌಟ್ : ‘ಕೇರಳ ಓಣಂ ಬಂಪರ್ ಲಾಟರಿ 25ಕೋಟಿ ರೂ. ಗೆದ್ದ ಮುಂಡಾಜೆಯ ಯುವಕ’ ಎನ್ನುವ ಸುಳ್ಳು ಸುದ್ದಿಯನ್ನು ‘ನ್ಯೂಸ್ ನಾಟೌಟ್’ ವೆಬ್‌ಸೈಟಿನಲ್ಲಿ ವರದಿಯಾಗಿದೆ ಎಂದು ಬಿಂಬಿಸುವಂತಹ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ವಾಟ್ಸಾಪ್ ಸ್ಕ್ರೀನ್ ಶಾಟ್ ಪೋಸ್ಟ್ ನ್ಯೂಸ್ ನಾಟೌಟ್ ಸಂಸ್ಥೆ ಗಮನಕ್ಕೆ ಬಂದಿದೆ. ಇದನ್ನು ಸಂಸ್ಥೆಯ ಆಡಳಿತ ವಿಭಾಗ ಗಂಭೀರವಾಗಿ ಪರಿಗಣಿಸಿದೆ. ಇದರ ವಿರುದ್ಧ ದೂರು ಕೇಳಿ ಬರುತ್ತಿದ್ದು ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಲಿದೆ.

ಅಸಲಿಗೆ ಇದು ‘ಕೇರಳ ಓಣಂ ಬಂಪರ್ ಲಾಟರಿ 25 ಕೋಟಿ ರೂ.ಗೆದ್ದ ಸುಳ್ಯದ ಯುವಕ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪೊಲೀಸ್ ದೂರು ದಾಖಲು’ ಎನ್ನುವ ಶೀರ್ಷಿಕೆಯಡಿ ಸೆಪ್ಟೆಂಬರ್ 22ರಂದು 6 ಗಂಟೆ 57 ನಿಮಿಷಕ್ಕೆ ವರದಿ ಪ್ರಕಟಿಸಿತ್ತು. ಇದನ್ನು ಕೆಲವು ಕಿಡಿಗೇಡಿಗಳು ಎಡಿಟ್ ಮಾಡಿ ತಿರುಚಿ ಬರೆದು ಇನ್ನೊಬ್ಬರ ಫೋಟೋವನ್ನು ಹಾಕಿ ಎಲ್ಲ ಕಡೆ ವೈರಲ್ ಮಾಡುತ್ತಿದ್ದಾರೆ. ಬೆಳ್ತಂಗಡಿಯ ಯುವಕ ಲಾಟರಿ ಗೆದ್ದಿದ್ದಾನೆಂದು ಬರೆದ ‘ನ್ಯೂಸ್ ನಾಟೌಟ್ ‘ ಲಿಂಕ್ ಹೊಂದಿರುವ ನ್ಯೂಸ್ ಗಳನ್ನು ಸೃಷ್ಟಿಸಿ , ಯಾರದ್ದೋ ಯುವಕನ ಫೋಟೋ ಅಟ್ಯಾಚ್ ಮಾಡಿ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸುತ್ತಿದ್ದಾರೆ. ಇಲ್ಲಿ ಕಿಡಿಗೇಡಿಗಳು ಸೃಷ್ಟಿಸಿದ ನ್ಯೂಸ್ ಗೂ , ನ್ಯೂಸ್ ನಾಟೌಟ್ ಗೂ ಯಾವುದೇ ಸಂಬಂಧವಿಲ್ಲ ಅನ್ನೋದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ. ಈ ಕುರಿತಂತೆ ಸಂಸ್ಥೆಗೆ ದೂರು ಬಂದರೆ ಸೈಬರ್ ಪೊಲೀಸರಿಗೆ ದೂರು ನೀಡುವುದಕ್ಕೆ ಸಿದ್ಧವಾಗಿದೆ. ಅಲ್ಲದೆ ಸಂಸ್ಥೆಯ ಏಳಿಗೆ ಸಹಿಸದೆ ಸುಳ್ಳು ಸುದ್ದಿ ಹಬ್ಬಿಸಿ ಇಮೇಜ್ ಗೆ ಧಕ್ಕೆ ತರುತ್ತಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯವಾಗಿದ್ದು ಅದಕ್ಕೆ ಅಗತ್ಯವಿರುವ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಸಂಸ್ಥೆ ಸದಾ ಬದ್ಧವಾಗಿದೆ.

See also  ಹುಣಸೂರಿನಲ್ಲಿ ಬಸ್ ಲಾರಿ ಕಾರು ನಡುವೆ ಸರಣಿ ಅಪಘಾತ, ಸಂಪಾಜೆಯ ಕಲ್ಲುಗುಂಡಿಯ ಕುಟುಂಬ ಪ್ರಾಣಾಪಾಯದಿಂದ ಪಾರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget