ನ್ಯೂಸ್ ನಾಟೌಟ್: ಕೆಲವು ಸಲ ನಮಗೆ ಗೊತ್ತಿಲ್ಲದೇ ಅನೇಕ ಅನಾಹುತಗಳು ಸಂಭವಿಸುತ್ತವೆ. ಇದರಲ್ಲಿ ಯಾರದ್ದು ತಪ್ಪು ಯಾರದ್ದು ಸರಿ ಅನ್ನುವ ಉತ್ತರ ಸಿಗುವುದಿಲ್ಲ. ಅಂತಹುದೇ ಒಂದು ಘಟನೆ ಸುಳ್ಯ ಸಮೀಪದ ಅರಂಬೂರಿನಲ್ಲಿ ನಡೆದಿದೆ. ಕಾರಿನಲ್ಲಿದ್ದ ತನ್ನ ಚಪ್ಪಲಿ ತೆಗೆಯೋಕೆ ಹೋಗಿ ಅಪ್ರಾಪ್ತ ಮಗ ಕಾರಿನ ಗೇರ್ ಗೆ ಅರಿವಿಲ್ಲದೆ ಕೈ ಹಾಕಿದ್ದರಿಂದ ಬಾಲಕ ಸಹಿತ ಕಾರು ನ್ಯೂಟ್ರಲ್ ನಲ್ಲಿ ಚಲಿಸಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಳವಡಿಸಿರುವ ರಸ್ತೆ ಸುರಕ್ಷಾ ಕಲ್ಲಿಗೆ ಗುದ್ದಿ ನಿಂತಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಸ್ವಲ್ಪ ಜಖಂಗೊಂಡಿದೆ.
ಮಡಿಕೇರಿ ಕಡೆಯಿಂದ ಬಂದ ಕಾರೊಂದು ಸುಳ್ಯದ ಅರಂಬೂರು ಸಮೀಪ ಅಂಗಡಿಯೊಂದರ ಪಕ್ಕದಲ್ಲಿ ತಮ್ಮ ಆಲ್ಟೋ ಕಾರನ್ನು ನಿಲ್ಲಿಸಿದ್ದರು. ಹಾಗೆ ಕಾರು ನಿಲ್ಲಿಸಿ ಖರೀದಿಗಾಗಿ ಅಪ್ಪ-ಅಮ್ಮ ತೆರಳಿದ್ದರು. ಈ ವೇಳೆ ಅವರ ಅಪ್ರಾಪ್ತ ಮಗ ಚಪ್ಪಲಿಯನ್ನು ಕಾರಿನಲ್ಲಿ ಬಿಟ್ಟಿದ್ದೇನೆಂದು ಅದನ್ನು ತರಲು ಹೋಗುತ್ತಾನೆ. ಬಾಲಕ ಚಪ್ಪಲಿ ತೆಗೆಯುತ್ತಿದ್ದ ವೇಳೆ ಕಾರಿನ ಗೇರ್ ಮೇಲೆ ಕೈ ತಾಗಿದ್ದರಿಂದ ಕಾರು ಹಠಾತ್ ನ್ಯೂಟ್ರಲ್ ಆಗಿದೆ. ಹ್ಯಾಂಡ್ ಬ್ರೇಕ್ ಹಾಕಿರಲಿಲ್ಲ ಎಂದು ತಿಳಿದು ಬಂದಿದೆ. ತಕ್ಷಣ ಕಾರು ಮುಂದಕ್ಕೆ ಇಲಿಜಾರಿನಲ್ಲಿ ಚಲಿಸಿ ರಸ್ತೆಯ ಬಲ ಬದಿಯ ಸುರಕ್ಷಾ ಕಲ್ಲಿಗೆ ಗುದ್ದಿದೆ. ತಕ್ಷಣ ಸ್ಥಳೀಯರೆಲ್ಲರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಬಾಲಕನ ಅಪ್ಪ-ಅಮ್ಮ ಮಾಡಿದ ಪುಣ್ಯದ ಫಲದಿಂದ ಸಂಭವನೀಯ ಅಪಾಯದಿಂದ ಪಾರಾಗಿದ್ದಾನೆ ಎಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ಮಾಹಿತಿ ನೀಡಿದ್ದಾರೆ.
Click 👇