ನ್ಯೂಸ್ ನಾಟೌಟ್ : ಸುಳ್ಯದ ಗಾಂಧಿನಗರ ಬಳಿ ಕೊಳಚೆ ನೀರು ರಾಷ್ಟ್ರೀಯ ಹೆದ್ದಾರಿಗೆ ಚಿಮ್ಮುತ್ತಿದ್ದ ಬಗ್ಗೆ ‘ನ್ಯೂಸ್ ನಾಟೌಟ್’ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ವಿಡಿಯೋ ಪ್ರಕಟಿಸಿದ ಬೆನ್ನಲ್ಲೇ ನಗರ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪರಿಶೀಲನೆಯನ್ನು ನಡೆಸಿ ದುರ್ನಾತ ಬೀರುತ್ತಿದ್ದ ನೀರನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೊಳಚೆ ನೀರು ರಸ್ತೆಗೆ ನುಗ್ಗುತ್ತಿತ್ತು. ದುರ್ನಾತದಿಂದ ಸುತ್ತಮುತ್ತಲಿನ ಜನರು, ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರು, ವಿದ್ಯಾರ್ಥಿಗಳು ಮೂಗು ಹಿಡಿದುಕೊಂಡೇ ಓಡಾಡಬೇಕಿತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಇದೀಗ ‘ನ್ಯೂಸ್ ನಾಟೌಟ್’ ವಿಡಿಯೋ ವರದಿ ಪ್ರಕಟಿಸುತ್ತಿದ್ದಂತೆ ಅದನ್ನು ಸರಿಪಡಿಸುವ ಪ್ರಯತ್ನ ನಡೆದಿದೆ. ಮಾಧ್ಯಮದ ವರದಿಗಾರಿಕೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.