ನ್ಯೂಸ್ ನಾಟೌಟ್ : ಕಂದಕವೊಂದರಲ್ಲಿ ಮಾನವರ ಮೃತದೇಹಗಳಿರುವ 45 ಚೀಲಗಳು ಮೆಕ್ಸಿಕೋದಲ್ಲಿ ಪತ್ತೆಯಾಗಿದ್ದು, ಜನರು ಬೆಚ್ಚಿಬಿದ್ದಿದ್ದಾಳೆ.
ಕಳೆದ ವಾರ ನಾಪತ್ತೆಯಾಗಿದ್ದ 7 ಯುವಕರ ಹುಡುಕಾಟಕ್ಕೆಂದು ತೆರಳಿದ್ದ ಪೊಲೀಸರಿಗೆ ಪಶ್ಚಿಮ ಮೆಕ್ಸಿಕನ್ ರಾಜ್ಯವಾದ ಜಲಿಸ್ಕೋದ ಕಂದಕದಲ್ಲಿ 45 ಚೀಲಗಳು ಪತ್ತೆಯಾಗಿವೆ. ಕಳೆದ ವಾರ ನಾಪತ್ತೆಯಾಗಿದ್ದ 7 ಯುವಕರ ಹುಡುಕಾಟಕ್ಕೆಂದು ತೆರಳಿದ್ದ ಪೊಲೀಸರಿಗೆ ಪಶ್ಚಿಮ ಮೆಕ್ಸಿಕನ್ ರಾಜ್ಯವಾದ ಜಲಿಸ್ಕೋದ ಕಂದಕದಲ್ಲಿ 45 ಚೀಲಗಳು ಪತ್ತೆಯಾಗಿವೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಮನುಷ್ಯರ ದೇಹಗಳಿದ್ದವು. ಪುರುಷರು ಮಾತ್ರವಲ್ಲ ಮಹಿಳೆಯರ ಮೃತದೇಹಗಳೂ ಇದ್ದವು ಎನ್ನಲಾಗಿದೆ.
ಮೇ 20 ರಿಂದ ನಾಪತ್ತೆಯಾಗಿರುವ ಸುಮಾರು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರಿಗಾಗಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು. ಎಲ್ಲರೂ ಒಂದೇ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು, ಕಾಣೆಯಾದವರ ಬಗ್ಗೆ ಬೇರೆ ಬೇರೆ ದಿನ ದೂರು ದಾಖಲಾಗಿತ್ತು. ಈಗ ಮಾನವ ದೇಹಗಳು ಪತ್ತೆಯಾಗಿರುವ ಪ್ರದೇಶದಲ್ಲಿಯೇ ಕಾಲ್ ಸೆಂಟರ್ ಕೂಡ ಇದೆ. ವಿಧಿವಿಜ್ಞಾನ ತಜ್ಞರು ಮೃತರ ಸಂಖ್ಯೆ ಮತ್ತು ಅವರ ಗುರುತುಗಳನ್ನು ಇನ್ನೂ ಪತ್ತೆ ಹಚ್ಚಬೇಕಿದೆ. ಇವರೆಲ್ಲ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂದು ಪ್ರಾಥಮಿಕ ವಿಚಾರಣೆಗಳು ಸೂಚಿಸಿವೆ. 2021 ರಲ್ಲಿ, ಜಲಿಸ್ಕೋದ ಟೋನಾಲಾದಲ್ಲಿ, 11 ಜನರ ಮಾನವ ಅವಶೇಷಗಳಿದ್ದ ಸುಮಾರು 70 ಚೀಲಗಳು ಕಂಡು ಬಂದಿದ್ದವು.