ಕ್ರೈಂವೈರಲ್ ನ್ಯೂಸ್

ಪುಟ್ಟ ಮಕ್ಕಳೊಂದಿಗೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ..! ಪ್ರೀತಿಸಿ ಮದುವೆಯಾದ ದಂಪತಿ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲೇನಿದೆ..?

ನ್ಯೂಸ್ ನಾಟೌಟ್: ಒಂದು ತಿಂಗಳ ಹಿಂದೆ ಜನಿಸಿದ ಹಸುಗೂಸು, ಮತ್ತೊಂದು ಮೂರು ವರ್ಷದ ಮಗು, ಈ ಎರಡು ಮಕ್ಕಳ ಜೊತೆ ಯುವ ದಂಪತಿಗಳಿಬ್ಬರು ದಯಾ ಮರ* ಣಕ್ಕೆ ಅರ್ಜಿ ಹಾಕಿದ್ದಾರೆ.

ಇಷ್ಟಕ್ಕೂ ಈ ದಂಪತಿಗಳಿಗೆ ಆಗಿರುವ ಕಾರಣ ಏನು? ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲೇನಿದೆ ಸೇರಿದಂತೆ ಪ್ರಮುಖ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಓದಿ.
ಹೌದು, ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳಿ ಗ್ರಾಮದ ಅರುಳ್ ಸೆಲ್ವ ಸಗಾಯರಾಜ್ ಹಾಗೂ ಪತ್ನಿ ಲ್ಯಾನ್ಸಿ ಲೀನಾ ದಂಪತಿ ದಯಾ ಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಐದು ವರ್ಷಗಳ ಹಿಂದೆ ಲ್ಯಾನ್ಸಿ ಲೀನಾ ಮತ್ತು ಅದೇ ಗ್ರಾಮದ ಅರುಳ್ ಸೆಲ್ವ ಸಗಾಯರಾಜ್ ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಾಸ ಮಾಡಲು ಮನೆ ಇಲ್ಲದ ಕಾರಣ, ಅರುಳ್ ಸೆಲ್ವ ಸಗಾಯರಾಜ್ ತಾಯಿ ಮೋಕ್ಷರಾಣಿ ಅನುಮತಿ ಪಡೆದು ₹4 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಮೂರು ವರ್ಷಗಳಿಂದಲೂ ಮೋಕ್ಷರಾಣಿಯವರು ತಮಗೆ ಸೇರಿದ ನಿವೇಶನವನ್ನು ಖಾಲಿ ಮಾಡಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

‘ಮೂರು ಬಾರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನ್ಯಾಯಪಂಚಾಯಿತಿ ಮಾಡಿದ್ದಾರೆ. ನಾವು ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಬಾಡಿಗೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಈಗ ಮನೆಯಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡಿ ತಾಯಿಗೆ ಮನವಿ ಮಾಡಿಕೊಂಡರೂ ಮತ್ತೆ ಮೋಕ್ಷರಾಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೆಪ್ಟೆಂಬರ್ 10ರೊಳಗೆ ಮನೆ ಖಾಲಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ನಮಗೆ ಜೀವನ ಮಾಡಲು ಅವಕಾಶ ನೀಡಿ, ಇಲ್ಲದಿದ್ದರೆ ಮೂರು ವರ್ಷ ಮಗು, ತಿಂಗಳ ಹಸುಗೂಸು, ನನಗೆ ಹಾಗೂ ಗಂಡನಿಗೆ ದಯಾ ಮರಣಕ್ಕೆ ಅನುಮತಿ ನೀಡಿ’ ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ಅವರಿಗೆ ಬರೆದಿರುವ ಲ್ಯಾನ್ಸಿ ಲೀನಾ ಹೇಳಿದ್ದಾರೆ.

Related posts

ಜನವರಿ 20 ರ ಬಳಿಕ ಮದ್ಯದ ದರಗಳಲ್ಲಿ ಏರಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಪೊಲೀಸರೆಂದು ವಿದೇಶಿ ಪ್ರಜೆಯಿಂದ ಡಾಲರ್ ದೋಚಿ ಪರಾರಿ! ಕಾರು ತಪಾಸನೆಯ ನಾಟಕವಾಡಿದ್ದ ಖದೀಮರು!

ಉಡುಪಿಯ ಖಾಸಗಿ ಕಾಲೇಜೊಂದರ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ..!ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು‌!