ಕ್ರೈಂ

ನವಜಾತ ಶಿಶುವಿನ ಮೇಲೆ ಕಾಲಿಟ್ಟ ಪೊಲೀಸ್! ಇಲ್ಲಿದೆ 4 ದಿನದ ಮಗುವಿನ ಸಾವಿನ ರೋಚಕ ಹಿನ್ನೆಲೆ !

417

ನ್ಯೂಸ್‌ ನಾಟೌಟ್‌: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಬುಧವಾರ (ಮಾರ್ಚ್ ೨೨) ನಾಲ್ಕು ದಿನದ ನವಜಾತ ಶಿಶುವನ್ನು ಪೊಲೀಸ್ ಅಧಿಕಾರಿಯೊಬ್ಬರು ಕೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತು ಮುಖ್ಯಮಂತ್ರಿ ಹೇಮಂತ್ ಸೊರೆನ್ ತನಿಖೆಗೆ ಆದೇಶಿಸಿದ್ದಾರೆ.

ಜಿಲ್ಲೆಯ ಕೊಸೊಗೊಂಡೋಡಿಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಅಜ್ಜ ಬೇರೆ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದು, ಆರೋಪಿಯನ್ನು ಹುಡುಕಲು ಪೊಲೀಸರು ಮನೆಗೆ ತೆರಳಿದ್ದರು, ಆರೋಪಿಯಾದ ಮಗುವಿನ ಅಜ್ಜನನ್ನು ಹುಡುಕುವ ವೇಳೆ ಕೊಠಡಿಯೊಂದರಲ್ಲಿ ಮಲಗಿದ್ದ ನವಜಾತ ಶಿಶುವಿನ ಮೇಲೆ ಪೊಲೀಸರು ಕಾಲಿಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ, ದಿಯೋರಿ ಪೊಲೀಸ್ ಠಾಣೆಯ ಉಸ್ತುವಾರಿ ಸಂಗಮ್ ಪಾಠಕ್ ನೇತೃತ್ವದ ತಂಡವು ಆರೋಪಿ ಭೂಷಣ್ ಪಾಂಡೆ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ಆತನನ್ನು ಬಂಧಿಸಲು ಮನೆಗೆ ಹೋಗಿತ್ತು. ಪೊಲೀಸರನ್ನು ನೋಡಿದ ಭೂಷಣ್ ಅವರ ಕುಟುಂಬದ ಸದಸ್ಯರೆಲ್ಲರೂ ನವಜಾತ ಶಿಶುವನ್ನು ಮನೆಯಲ್ಲಿಯೇ ಬಿಟ್ಟು ಮನೆಯಿಂದ ಓಡಿಹೋಗಿದ್ದಾರೆ ಎನ್ನಲಾಗಿದೆ.

“ಪೊಲೀಸರು ಮನೆಯ ಮೂಲೆ ಮೂಲೆಗಳನ್ನು ಹುಡುಕುತ್ತಿದ್ದಾಗ ನಾಲ್ಕು ದಿನದ ಮಗು ಒಳಗೆ ಮಲಗಿತ್ತು. ಪೊಲೀಸ್ ತಂಡ ಹೋದ ನಂತರ, ಮನೆಗೆ ತಲುಪಿ ನೋಡಿದಾಗ ತನ್ನ ಮಗುವನ್ನು ಶವವಾಗಿ ಪತ್ತೆಯಾಗಿದೆ” ಎಂದು ಮೃತ ಮಗುವಿನ ತಾಯಿ ನೇಹಾದೇವಿ ಹೇಳಿದ್ದಾರೆ.

ಮೃತ ನವಜಾತ ಶಿಶುವಿನ ತಾಯಿ ಮತ್ತು ಭೂಷಣ್ ಪಾಂಡೆ ಸೇರಿದಂತೆ ಮನೆಯ ಇತರ ಸದಸ್ಯರು ಮಗುವನ್ನು ಪೊಲೀಸರೇ ತುಳಿದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆಯನ್ನು ಗಮನಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

See also  ಪಹಲ್ಗಾಮ್ ದಾಳಿಯ ಬೆನ್ನಲ್ಲೇ 2 ಉಗ್ರರನ್ನು ಹತ್ಯೆ ಮಾಡಿದ ಸೇನೆ..! ನಿನ್ನೆಯ(ಎ.22) ಭಯೋತ್ಪಾದಕ ದಾಳಿಯಲ್ಲಿ ಒಟ್ಟು 26 ಮಂದಿ ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget