ಕ್ರೈಂದೇಶ-ಪ್ರಪಂಚ

ವಿವಾಹ ಸಮಾರಂಭದಲ್ಲಿ ಕುದಿಯುತ್ತಿದ್ದ ರಸಂ ಪಾತ್ರೆಗೆ ಬಿದ್ದ ಯುವಕ ದುರಂತ ಅಂತ್ಯ! ನಿಜವಾಗಿಯೂ ಅಲ್ಲಿ ನಡೆದದ್ದೇನು?

ನ್ಯೂಸ್ ನಾಟೌಟ್:  ಆಕಸ್ಮಿಕವಾಗಿ ಕುದಿಯುತ್ತಿದ್ದ ರಸಂ ಪಾತ್ರೆಗೆ ಬಿದ್ದು 21 ವರ್ಷದ ಯುವಕನೊಬ್ಬ ಸುಟ್ಟ ಗಾಯಗಳಿಂದ ಮೃತಪಟ್ಟಿರುವ ಘಟನೆ ಚೆನ್ನೈನ ನೆರೆಯ ಜಿಲ್ಲೆಯಾದ ತಿರುವಳ್ಳುವರ್ ಜಿಲ್ಲೆಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾನುವಾರ ನಡೆದಿದೆ.

ಸಂತ್ರಸ್ತ ಯುವಕನು ಕಾಲೇಜು ವಿದ್ಯಾರ್ಥಿಯಾಗಿದ್ದು, ಆಹಾರ ಪೂರೈಕೆ ಸಂಸ್ಥೆಯೊಂದರಲ್ಲಿ ಅರೆಕಾಲಿಕ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ವಾರ ಈ ಘಟನೆ ನಡೆದಾಗ ಯುವಕನು ವಿವಾಹ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಆಹಾರ ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿಥಿಗಳಿಗೆ ಬಡಿಸಲು ಸಿದ್ಧಪಡಿಸಲಾಗುತ್ತಿದ್ದ ಕುದಿಯುವ ರಸಂ ಪಾತ್ರೆಗೆ ಯುವಕ ಆಕಸ್ಮಿಕವಾಗಿ ಯುವಕ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ತೀವ್ರ ಸುಟ್ಟ ಗಾಯಗಳಿಗೀಡಾಗಿದ್ದ ಯುವಕನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related posts

ಕೊಡಗು: ಬಿಜೆಪಿ ಕಾರ್ಯಕರ್ತನ ಸಾವು ಪ್ರಕರಣ..! ಯದುವೀರ್ ಸೇರಿ ಹಲವು ಬಿಜೆಪಿ ಮುಖಂಡರಿಂದ ಪ್ರತಿಭಟನೆ..! ನಿಷೇಧಾಜ್ಞೆ ಜಾರಿ

ತಿರುಪತಿ: ಹಿಂದೂಯೇತರ ಧಾರ್ಮಿಕ ಆಚರಣೆಗಳನ್ನು ಅನುಸರಿಸಿದ 18 ಸಿಬ್ಬಂದಿ ವಿರುದ್ಧ ಕ್ರಮ..! ಇಲ್ಲಿದೆ ಸಂಪೂರ್ಣ ಮಾಹಿತಿ

ಸೋಮವಾರಪೇಟೆ: ಯುವತಿ ಮೇಲೆ ಮೂವರಿಂದ ಅತ್ಯಾಚಾರ ಯತ್ನ