ಕ್ರೈಂದೇಶ-ಪ್ರಪಂಚ

ಪಡಿತರ ವಿತರಣೆ ವೇಳೆ ಕಾಲ್ತುಳಿತ! ಪಾಕ್ ನಲ್ಲಿ 11 ಮಂದಿಯ ದುರಂತ ಸಾವು!

ನ್ಯೂಸ್‌ನಾಟೌಟ್‌: ಪಾಕಿಸ್ಥಾನದ ಕರಾಚಿಯಲ್ಲಿ ರಮ್ಜಾನ್‌ ಆಹಾರ ವಿತರಣಾ ಕೇಂದ್ರದಲ್ಲಿ ಶುಕ್ರವಾರ ಆಹಾರ ವಿತರಣೆಯ ವೇಳೆ ಕಾಲ್ತುಳಿತದಿಂದಾಗಿ ಭಾರಿ ಅನಾಹುತ ಸಂಭವಿಸಿದೆ.

ಕಾಲ್ತುಳಿತದಿಂದ ಮಹಿಳೆಯರು ಮತ್ತು ಮಕ್ಕಳು ಸೇರಿ 11 ಮಂದಿ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಆಹಾರ ವಿತರಣೆ ನಡೆಯುತ್ತಿದ್ದ ಪ್ರದೇಶದಲ್ಲಿ ವಿದ್ಯುತ್‌ ಪ್ರವಾಹವಿದ್ದ ತಂತಿಯೊಂದು ಬಿದ್ದಿತ್ತು. ಕೆಲವರು ಗೊತ್ತಿಲ್ಲದೇ ಅದರ ಮೇಲೆ ಕಾಲಿಟ್ಟಿದ್ದಾರೆ.

ಅದು ಶಾಕ್‌ ಹೊಡೆದಾಗ ಭಯದಿಂದ ಒಬ್ಬರನ್ನೊಬ್ಬರು ನೂಕಿ ಮುಂದೆ ಓಡಲು ಆರಂಭಿಸಿದ್ದಾರೆ. ಈ ವೇಳೆ ಉಂಟಾದ ತಳ್ಳಾಟದಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

Related posts

ಬಸ್ಸಿನಲ್ಲಿ ಮಹಿಳೆಯ ಜಡೆ ಸವರಿದಾತನ ವಿರುದ್ಧ ಪ್ರಕರಣ ದಾಖಲು

ಬೋರ್​ವೆಲ್​ಗೆ ಬಿದ್ದ ವೃದ್ಧೆಯನ್ನು ಹೊರತೆಗೆದದ್ದೇಗೆ? 80 ವರ್ಷದ ಅಜ್ಜಿ ಬಿದ್ದ ಕೊಳವೆ ಬಾವಿಯೊಳಗೆ ಹಾವಿತ್ತಾ..? ಮುಂದೇನಾಯ್ತು?

ಕರ್ಕಶ ಹಾರ್ನ್‌ ಹಾಕಿ ಕಿರಿಕಿರಿ ಮಾಡುತ್ತಿದ್ದ ವಾಹನ ಚಾಲಕರಿಗೆ ಅದೇ ಹಾರ್ನ್ ಮೂಲಕ ಶಿಕ್ಷೆ ನೀಡಿದ ಪೊಲೀಸ್..! ಇಲ್ಲಿದೆ ವಿಡಿಯೋ