ನ್ಯೂಸ್ ನಾಟೌಟ್: ‘ನಮ್ಮ ದೇಶಕ್ಕೆ ಕೃಷಿಕ ಮತ್ತು ಸೈನಿಕ ಎರಡು ಕಣ್ಣುಗಳಿದ್ದಂತೆ. ಕಣ್ಣಿಗೆ ಕಾಣದ ಇನ್ನೂ ಒಂದು ಕಣ್ಣೆಂದರೆ ಅದು ಲೆಕ್ಕ ಪರಿಶೋಧಕ. ಆತನ ಶ್ರಮವಿಲ್ಲದೆ ಯಾವ ದೇಶವೂ ಕೂಡ ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯವಿಲ್ಲ’ ಎಂದು ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ತಿಳಿಸಿದ್ದಾರೆ.
ಉದ್ಯಾನನಗರಿ ಬೆಂಗಳೂರಿನ ಜಯನಗರದಲ್ಲಿ ಜೂ24ರಂದು ನಡೆದ ನೌಫಲ್ ಎಂ & ಕಂಪನಿ ಚಾರ್ಟೆಡ್ ಅಕೌಂಟ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
‘ಕೃಷಿಕ ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತಾನೆ, ಸೈನಿಕ ತಮ್ಮವರನ್ನೆಲ್ಲ ಮರೆತು ದೇಶಕ್ಕಾಗಿ ದುಡಿಯುತ್ತಾನೆ. ಇಬ್ಬರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಇವರಿಬ್ಬರು ನಮ್ಮ ಎರಡು ಕಣ್ಣುಗಳಿದ್ದಂತೆ, ಹಾಗೆಯೇ ನಮ್ಮ ಕಣ್ಣಿಗೆ ಕಾಣದ ಮೂರನೇ ಕಣ್ಣು ಕೂಡ ಇದೆ. ಈ ಮೂರನೇ ಕಣ್ಣೇ ಲೆಕ್ಕ ಪರಿಶೋಧಕ. ಯಾವ ದೇಶ ಅಥವಾ ಯಾವ ಸಂಸ್ಥೆ ಕೂಡ ಲೆಕ್ಕ ಪರಿಶೋಧನೆ ಇಲ್ಲದೆ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ. ಪ್ರಧಾನಿ, ಮುಖ್ಯಮಂತ್ರಿ ಯಾವ ಪ್ರಭಾವಿ ಹುದ್ದೆಯಲ್ಲಿ ಇದ್ದರೂ ಲೆಕ್ಕಪರಿಶೋಧಕ ಸಹಿ ಹಾಕಿದರೆ ಮಾತ್ರ ಲೆಕ್ಕಾಚಾರ ಪೂರ್ಣಗೊಳ್ಳುತ್ತದೆ. ಅವರ ಕೆಲಸವನ್ನು ಅವರಿಗೆ ಮಾತ್ರ ನಿಭಾಯಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರ ಸುಪುತ್ರಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ನೌಫಲ್ ಎಂ & ಕಂಪನಿ ಮುಖ್ಯಸ್ಥರು, ಸಿಬ್ಬಂದಿ ವರ್ಗ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.