ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ಕುಸ್ತಿಪಟುಗಳು ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರದ ಕುರಿತು ಸಂಸದ ಹೇಳಿದ್ದೇನು? ಕುಸ್ತಿಪಟುಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದದ್ದೇಕೆ?

ನ್ಯೂಸ್ ನಾಟೌಟ್ :  ಕುಸ್ತಿಪಟುಗಳ ಮೇಲೆ ಲೈಗಿಂಕ ಕಿರುಕುಳ ಆರೋಪ ಸಂಬಂಧ ಅವರು ತಮ್ಮ ಅಮೂಲ್ಯ ಪದಕಗಳನ್ನು ಗಂಗಾ ನದಿಗೆ ಎಸೆಯುವ ನಿರ್ಧಾರದ ಕುರಿತು ಮಾತನಾಡಿರುವ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.

ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊಂದಿರರುವ ಅವರು, ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ನೀರಿಗೆ ಒಪ್ಪಿಸುವ ನಿರ್ಧಾರವು ಸಂಪೂರ್ಣವಾಗಿ ಅವರು ತೆಗೆದುಕೊಂಡ ನಿಲುವಾಗಿದೆ. ನನ್ನ ಮೇಲಿನ ಆರೋಪ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯವಿದ್ದರೆ ಬಂಧನವಾಗುವುದು ಎಂದು ಅವರು ಹೇಳಿದರು.

ಮಂಗಳವಾರ ಕುಸ್ತಿಪಟುಗಳು ತಾವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹರಿದ್ವಾರ ನಗರಕ್ಕೆ ಆಗಮಿಸಿದ್ದರು. ಆಗ ಅವರನ್ನು ನದಿ ದಡದಲ್ಲಿ ಮನವೊಲಿಸಿದ ರೈತ ಮುಖಂಡ ನರೇಶ್ ಟಿಕಾಯತ್ ವಾಪಸು ಕರೆತಂದರು. ನಂತರ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಐದು ದಿನಗಳ ಗಡುವು ನೀಡಿದರು.

Related posts

ತಡರಾತ್ರಿ ಪೊಲೀಸ್ ಠಾಣೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಠಾಣಾಧಿಕಾರಿಗಳಿಗೆ ಬೈದು ಬೆದರಿಕೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ FIR ದಾಖಲು

ಟಿಪ್ಪರ್ -ಕಾರು ಅಪಘಾತ ಪ್ರಕರಣ: ಶಿಕ್ಷೆ ಪ್ರಕಟಿಸಿದ ಸುಳ್ಯ ನ್ಯಾಯಾಲಯ

ಟೀಂ ಇಂಡಿಯಾ ಸ್ಟಾರ್ ಆಟಗಾರನ ಮಡದಿ ಇವರು,ಬಾಲಿವುಡ್ ನಲ್ಲಿ ಮಿಂಚಿದ್ದ ಈ ಚೆಲ್ವೆ ಬಗ್ಗೆ ನಿಮಗೆಷ್ಟು ಗೊತ್ತು…