ಕಾಸರಗೋಡುಕ್ರೈಂಬೆಂಗಳೂರುರಾಜ್ಯ

ತಲೆಮರೆಸಿಕೊಂಡಿದ್ದ ನ್ಯೂಸ್ ಆ್ಯಂಕರ್ ದಿವ್ಯ ವಸಂತ ಕೇರಳದಲ್ಲಿ ಬಂಧನ..! ಬೆಂಗಳೂರಿಗೆ ಕರೆತಂದ ಪೊಲೀಸರು..!

ನ್ಯೂಸ್ ನಾಟೌಟ್: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ವಸಂತರನ್ನು ಜುಲೈ 11 ರಂದು ಬೆಂಗಳೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆಕೆಯನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದು, ನಗರಕ್ಕೆ ಕರೆ ತಂದಿದ್ದಾರೆ ಎನ್ನಲಾಗಿದೆ.

ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಮಾಲೀಕನನ್ನು ಒಳಗೊಂಡ ಹಲವರನ್ನು ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತರನ್ನು ಬಂಧಿಸಲಾಗಿದೆ. ‘ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ’ ಎಂದು ನಟಿಯೊಬ್ಬರ ಖಾಸಗಿ ವಿಷಯವನ್ನು ಸುದ್ದಿ ಮಾಡಿ ತಾವೇ ಸುದ್ದಿಯಾಗಿದ್ದ ದಿವ್ಯ ವಸಂತ ಈಗ ಬಂಧನವಾಗಿ ಸುದ್ದಿಯಾಗುತ್ತಿದ್ದಾರೆ.

ಇಂದಿರಾನಗರದ ಬಳಿಯ ಸ್ಪಾ ಮ್ಯಾನೇಜರ್‌ಗೆ ಬೆದರಿಕೆ ಹಾಕಿ ಸುಲಿಗೆ ಯತ್ನ ನಡೆಸಿದ ಆರೋಪದಲ್ಲಿ ಆ್ಯಂಕರ್ ದಿವ್ಯಾ ವಸಂತ ಅವರ ತಮ್ಮನನ್ನು ಬಂಧಿಸಿದ್ದ ಬೆನ್ನಲ್ಲೇ ನೆರೆಯ ತಮಿಳುನಾಡಿಗೆ ಪರಾರಿಯಾಗಿದ್ದರು ಬಳಿಕ ಅಲ್ಲಿಂದ ಕೇರಳಕ್ಕೆ ತೆರಳಿದ್ದರು ಎಂಬ ಮಾಹಿತಿಯಿದೆ. ಈಗ ಪೊಲೀಸರು ಆರೋಪಿಯನ್ನು ಕೇರಳದಲ್ಲಿಯೇ ಬಂಧಿಸಿದ್ದಾರೆ.

Click 👇

https://newsnotout.com/2024/07/bharath-shetty-fir-kannada-news-bharath-shetty-kannada-news-rahukl-gandhi-hf
https://newsnotout.com/2024/07/dakshina-kannada-love-jihad-kannada-news-police-investigation
https://newsnotout.com/2024/07/adhar-link-with-sim-card-kannada-news-women-lost-80-k

Related posts

ವಿಟ್ಲ ದಲಿತ ಬಾಲಕಿ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮಂಗಳೂರು ಫೈಲ್ಸ್ ಎಂದ ಸಚಿವ ಗುಂಡೂರಾವ್..! ಕಠಿಣ ಕ್ರಮಕ್ಕೆ ಒತ್ತಾಯಿಸಿದ ರಮಾನಾಥ ರೈ..!

4 ವರ್ಷದ ಸ್ವಂತ ಮಗನನ್ನೇ ಕೊಂದ ಪಾಪಿ ತಾಯಿ..!ಹೆತ್ತ ತಾಯಿಗೆ ತನ್ನ ಮಗು ಬೇಡವಾಯಿತೇ?ಕೊಲೆಗೆ ಕಾರಣವೇನು?ಇಲ್ಲಿದೆ ಮಾಹಿತಿ

ದೇವರಕೊಲ್ಲಿ ಬಳಿ ಕಾರು-ಕಂಟೈನರ್ ಲಾರಿ ನಡುವೆ ಭೀಕರ ಅಪಘಾತ: ನಾಲ್ವರು ಗಂಭೀರ