ದೇಶ-ಪ್ರಪಂಚವೈರಲ್ ನ್ಯೂಸ್

ಕೆಲಸ ಬಿಟ್ಟರೆ 4 ಲಕ್ಷ ರೂ. ಕೊಡ್ತೀವಿ ಎಂದದ್ದೇಕೆ ಅಮೆಜಾನ್..?ಏನಿದು ಉದ್ಯೋಗಿಗಳಿಗೆ ವಿಚಿತ್ರ ಆಫರ್‌ ?

ನ್ಯೂಸ್ ನಾಟೌಟ್: ಕಂಪನಿಯನ್ನು ತೊರೆಯಲು ಬಯಸುವ ಉದ್ಯೋಗಿಗಳಿಗೆ 5,000 ಡಾಲರ್‌ ಅಂದರೆ ಸುಮಾರು 4.10 ಲಕ್ಷ ರೂ. ನೀಡುವ ಕೊಡುಗೆಯನ್ನು ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಪ್ರಕಟಿಸಿದ್ದಾರೆ ಎಂದು ವರದಿ ತಿಳಿಸಿದೆ.

ಹಿಂದೊಮ್ಮೆ ಜಾರಿಗೊಳಿಸಿದ್ದ ಪೇ ಟು ಕ್ವಿಟ್‌ ಯೋಜನೆಯನ್ನು ಈಗ ಮತ್ತೆ ಆರಂಭಿಸಲಾಗಿದೆ. ಕಂಪನಿಯಲ್ಲಿ ಉದ್ಯೋಗ ತ್ಯಜಿಸುವ ನೌಕರರಿಗೆ ‘ಉತ್ತೇಜಕ’ವಾಗಿ ಹಣವನ್ನು ನೀಡುವ ಪರಿಪಾಠವನ್ನು ಅಮೆಜಾನ್‌ ಶುರು ಮಾಡಿದೆ ಎನ್ನಲಾಗಿದೆ.

ಕಂಪನಿಗೆ ನಿಷ್ಠೆ ಮತ್ತು ಸಮರ್ಪಣೆಯೊಂದಿಗೆ ಉತ್ಸಾಹದಿಂದ ಕೆಲಸ ಮಾಡುವವರನ್ನು ಗುರುತಿಸಲು ಪೇ ಟು ಕ್ವಿಟ್‌ ಯೋಜನೆಯನ್ನು ಜಾರಿಗೊಳಿಸಿದ್ದಾಗಿ ಜೆಫ್‌ ಬೆಜೋಸ್‌ ಹೇಳಿದ್ದರು ಎನ್ನಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಪೇ ಟು ಕ್ವಿಟ್‌ ಕೊಡುಗೆಯನ್ನು ನೀಡಲಾಗುತ್ತದೆ ಎಂದು ಷೇರುದಾರರಿಗೆ ಬರೆದ ಪತ್ರದಲ್ಲಿ ಜೆಫ್‌ ಬೆಜೋಸ್‌ ತಿಳಿಸಿದ್ದಾರೆ.

ಮೊದಲ ಬಾರಿಗೆ ಈ ಕೊಡುಗೆ ಜಾರಿಗೊಳಿಸಿದಾಗ, 2,000 ಡಾಲರ್‌ಗಳ ಆಫರ್‌ ಉದ್ಯೋಗಿಗಳಿಗೆ ನೀಡಿದ್ದರು. ನಂತರ 1,000 ಡಾಲರ್‌ಗಳಷ್ಟು ಹೆಚ್ಚಿಸಲಾಗಿತ್ತು. 2014ರಲ್ಲಿ ಪರಿಚಯಿಸಿದ್ದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎನ್ನಲಾಗಿದೆ.

ಕೆಲಸ ತೊರೆಯುವ ಉದ್ಯೋಗಿಗಳಿಗೆ ಹಣ ನೀಡುವ ಕೊಡುಗೆಯನ್ನು ಅಮೆಜಾನ್‌ ಪ್ರಕಟಿಸಿದ್ದು, ಈ ಬಗ್ಗೆ ಇಮೇಲ್‌ ರವಾನಿಸಲಾಗಿದೆ. ‘ದಯವಿಟ್ಟು ಈ ಆಫರ್‌ ಅನ್ನು ಸ್ವೀಕರಿಸಬೇಡಿ’ ಎನ್ನುವ ಶೀರ್ಷಿಕೆ ನೀಡಲಾಗಿದೆ. ”ಯಾರೂ ಈ ಪ್ರಸ್ತಾಪವನ್ನು ಸ್ವೀಕರಿಸುತ್ತಾರೆ ಎಂದು ನಾವು ಭಾವಿಸುವುದಿಲ್ಲ. ಎಲ್ಲರೂ ನಮ್ಮಲ್ಲಿಯೇ ಉಳಿಯಬೇಕೆಂದು ನಾವು ಬಯಸುತ್ತೇವೆ,” ಎಂದು ಇಮೇಲ್‌ನಲ್ಲಿ ಹೇಳಲಾಗಿದೆ.

ಉದ್ಯೋಗಿಗಳನ್ನು ಪ್ರಚೋದಿಸಲು ಪೇ ಟು ಕ್ವಿಟ್‌ ಕೊಡುಗೆಯನ್ನು ಜಾರಿಗೆ ತರಲಾಗಿದೆ ಎಂದು ಜೆಫ್‌ ಬೆಜೋಸ್‌ ವಿವರಿಸಿದ್ದಾರೆ. “ಉದ್ಯೋಗಿಗಳು ತಮಗೆ ಬೇಕಾದುದನ್ನು ಒಮ್ಮೆ ಯೋಚಿಸಬೇಕು. ನೀವು ನಮ್ಮೊಂದಿಗೆ ದೀರ್ಘಕಾಲ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ. ಸುದೀರ್ಘ ವೃತ್ತಿ ಜೀವನವನ್ನು ನೀವು ನಮ್ಮಲ್ಲಿ ಬಯಸುವಿರಾ? ನಮ್ಮಲ್ಲಿ ಕೆಲಸದ ವಾತಾವರಣ ಚೆನ್ನಾಗಿದೆಯೇ? ನೀವು ಇಲ್ಲಿಯೇ ಉಳಿಯಲು ಬಯಸುವಿರೋ, ಅಥವಾ ಬೇರೆ ಕಡೆಗೆ ಹೋಗಲು ಯೋಚಿಸುವಿರೋ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ,” ಎಂದು ಉದ್ಯೋಗಿಗಳನ್ನು ಉದ್ದೇಶಿಸಿ ಜೆಫ್‌ ಹೇಳಿದ್ದಾರೆ ಎನ್ನಲಾಗಿದ

Related posts

ಆಕಸ್ಮಿಕವಾಗಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್..! ಹಿಂದಿರುಗಿಸಲು ನಿರಾಕರಿಸಿದರೇ ದೇವಸ್ಥಾನದ ಸಿಬ್ಬಂದಿ..?

I.N.D.I.A ಒಕ್ಕೂಟದ ಸದಸ್ಯರೊಂದಿಗೆ ಮಾತನಾಡದೇ ಯಾವುದೇ ಉತ್ತರ ನೀಡುವುದಿಲ್ಲ ಎಂದ ರಾಹುಲ್ ಗಾಂಧಿ ..! ನಮ್ಮ ನಿರೀಕ್ಷೆಯಂತೆ ಸ್ಥಾನ ಗೆಲ್ಲಲಾಗಲಿಲ್ಲ ಎಂದ ಸಿದ್ದರಾಮಯ್ಯ

ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆ ಅಧಿಕಾರಿಗಳು ಬಚಾವದದ್ದೇಗೆ? ಭಾರತದ ಆ ಒಂದು ನಡೆಗೆ ಕತಾರ್ ತಲೆಬಾಗಿತಾ..?