ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಅಮೆರಿಕದಲ್ಲಿ ಮನೆ ಮುಂದೆ ಅಮಿತಾಭ್ ಬಚ್ಚನ್ ಮೂರ್ತಿ ಪ್ರತಿಷ್ಠಾಪಿಸಿದ ಅಭಿಮಾನಿ..! ಪ್ರತಿಮೆ ನೋಡಲು ಮುಗಿಬಿದ್ದ ಜನ..!

242

ನ್ಯೂಸ್ ನಾಟೌಟ್: ಭಾರತದಲ್ಲಿ ಅನೇಕ ನಟ-ನಟಿಯರ ಮೂರ್ತಿಗಳನ್ನು ಮಾಡಿ ಅದನ್ನು ದೇವರಂತೆ ಆರಾಧಿಸಿ ಅಂಧಾಭಿಮಾನ ಮೆರೆಯುವುದನ್ನು ಕಂಡಿದ್ದೇವೆ. ಈಗ ಅಮೆರಿಕದ ನ್ಯೂಜೆರ್ಸಿ ರಾಜ್ಯದ ಎಡಿಸನ್ ನಗರದಲ್ಲಿ ಭಾರತೀಯ – ಅಮೆರಿಕನ್ ಉದ್ಯಮಿ ಗೋಪಿ ಸೇಠ್ ಮನೆ ಗೂಗಲ್ ಮ್ಯಾಪ್‌ನಲ್ಲಿ ಪ್ರವಾಸಿ ತಾಣವಾಗಿ ಕಾಣುತ್ತಿದೆ.

ಇದಕ್ಕೆ ಕಾರಣ ಅಮಿತಾಭ್ ಬಚ್ಚನ್ ಪ್ರತಿಮೆ. ತಮ್ಮ ಮನೆಯ ಮುಂದೆ ಅಮಿತಾಭ್ ಬಚ್ಚನ್ ಪ್ರತಿಮೆಯನ್ನು ನಿರ್ಮಿಸಿಕೊಂಡಿದ್ದು, ಈ ಪ್ರತಿಮೆ ನೋಡಲು ಪ್ರತಿ ದಿನವೂ ಜನರು ಆಗಮಿಸುತ್ತಿದ್ದಾರೆ. ಆಗಸ್ಟ್‌ 2022ರಲ್ಲಿ ಗೋಪಿ ಸೇಠ್ ತಮ್ಮ ಮನೆಯ ಮುಂದೆ ಅಮಿತಾಭ್ ಬಚ್ಚನ್ ಅವರ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ನಿವಾಸವು ಮ್ಯಾನ್‌ಹಟನ್‌ನಿಂದ ಸುಮಾರು 35 ಕಿ. ಮೀ. ದೂರದಲ್ಲಿದ್ದು, ದಕ್ಷಿಣ ಭಾಗದಲ್ಲಿದೆ. ಗೋಪಿ ಸೇಠ್ ಅವರು ಅಮಿತಾಭ್ ಬಚ್ಚನ್ ಅವರ ಅತಿ ದೊಡ್ಡ ಅಭಿಮಾನಿಯಾಗಿದ್ದು, ತಮ್ಮ ಆರಾಧ್ಯ ದೈವದಂತಿರುವ ಅಮಿತಾಭ್ ಬಚ್ಚನ್ ಅವರಿಗೆ ಗೌರವ ಸಲ್ಲಿಸಲು ತಮ್ಮ ಮನೆಯ ಮುಂದೆ ಅಮಿತಾಭ್ ಬಚ್ಚನ್ ಅವರ ಪ್ರತಿಮೆ ನಿರ್ಮಿಸಿರೋದು ಮಾತ್ರವಲ್ಲ, ತಮ್ಮ ಮನೆಯನ್ನೇ ಬಾಲಿವುಡ್ ಅಭಿಮಾನಿಗಳ ಅಚ್ಚುಮೆಚ್ಚಿನ ಲ್ಯಾಂಡ್ ಮಾರ್ಕ್‌ ಮಾಡಿಬಿಟ್ಟಿದ್ದಾರೆ.

ಎಡಿಸನ್ ನಗರವು ಭಾರತೀಯ ಅಮೆರಿಕನ್ ನಿವಾಸಿಗಳ ಅಚ್ಚುಮೆಚ್ಚಿನ ನಗರವಾಗಿದ್ದು, ಇಲ್ಲಿ ಭಾರತೀಯ ಮೂಲದವರ ಜನಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಗೋಪಿ ಸೇಠ್ ಅವರ ಮನೆ ಮುಂದೆ ಇರುವ ಅಮಿತಾಭ್ ಬಚ್ಚನ್ ಅವರ ಪ್ರತಿಮೆ ನೋಡಲು ಎಡಿಸನ್ ನಗರದ ನಿವಾಸಿಗಳು ಮಾತ್ರವಲ್ಲ, ಅಮೆರಿಕ ಪ್ರಜೆಗಳೂ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.

Click

https://newsnotout.com/2024/08/cyclinder-lpg-kannada-news-price-hike-kannada-news-viral-mews
https://newsnotout.com/2024/08/court-and-custody-darshan-and-gang-viral-news
See also  215 ಕಿ.ಮೀ. ವೇಗದಲ್ಲಿ ಲಂಬೋರ್ಗಿನಿ ಓಡಿಸಿದ ರೋಹಿತ್ ಶರ್ಮಾ..! ಶಾಕ್ ಕೊಟ್ಟ ಮುಂಬೈ ಪೊಲೀಸರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget