ನ್ಯೂಸ್ ನಾಟೌಟ್: ರಶ್ಮಿಕಾ ಮಂದಣ್ಣ ಸ್ಟಾರ್ ನಟಿಯಾಗಿ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್ ನಟರೊಂದಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ಕನ್ನಡದ ʻಕಿರಿಕ್ ಪಾರ್ಟಿʼ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಈಗ ಹೊಸ ಬ್ಯುಸಿನೆಸ್ ಕೂಡ ಶುರು ಮಾಡಿದ್ದಾರೆ.
ಹೊಸ ಬ್ಯುಸಿನೆಸ್ ಶುರು ಬಗ್ಗೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಮಾಹಿತಿ ಹಂಚಿಕೊಂಡಿದ್ದಾರೆ. ರಶ್ಮಿಕಾ, ಅವರ ತಾಯಿ ಸುಮನ್ ಮಂದಣ್ಣ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ, “ಇಂದು ನಾನು ತುಂಬಾ ಮುಖ್ಯವಾದ ಶೂಟಿಂಗ್‌ಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ಅಮ್ಮ ನೀವು ಹೇಳಿದ ಬ್ಯುಸಿನೆಸ್ ನಾನು ಆರಂಭಿಸುತ್ತಿದ್ದೇನೆʼ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಸುಮನ್, ಮಗಳ ಹೊಸ ಕಾರ್ಯಕ್ಕೆ ಶುಭಾಶಯ ಕೋರಿದ್ದಾರೆ..
ಬ್ಯುಸಿನೆಸ್ ಯಾವುದು?
ರಶ್ಮಿಕಾ ತಾವು ಆರಂಭಿಸುತ್ತಿರುವ ಬ್ಯುಸಿನೆಸ್‌ನ ವಿವರಗಳನ್ನು ಹೇಳಿಕೊಂಡಿಲ್ಲ.ಆದರೆ ಈ ಬಗ್ಗೆ ರಿವೀಲ್ ಮಾಡೋದಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ ರಶ್ಮಿಕಾ ಶುರು ಮಾಡುತ್ತಿರುವ ಹೊಸ ಬ್ಯುಸಿನೆಸ್ ಯಾವುದು ಅನ್ನೋದು ಅವರ ಅಭಿಮಾನಿಗಳಿಗಿರುವ ಕುತೂಹಲ. ರಶ್ಮಿಕಾ ಮಂದಣ್ಣ ಹೊಸ ಕಾರ್ಯಕ್ಕೆ ಅವರ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ