ನ್ಯೂಸ್ ನಾಟೌಟ್: ಯುಗಾದಿ ಹಬ್ಬಕ್ಕೂ ಮುನ್ನವೇ ಈ ವರ್ಷದ ಮೊದಲನೇ ಸೂರ್ಯಗ್ರಹಣ ಇಂದು(ಮಾ.29) ಸಂಭವಿಸಲಿದೆ. ಈ ಸೂರ್ಯ ಗ್ರಹಣವು ಭಾಗಶಃ ಸೂರ್ಯ ಗ್ರಹಣವಾಗಿದ್ದು ಭಾರತೀಯ ಕಾಲಮಾನ ಇಂದು ಮಧ್ಯಾಹ್ಮ 2:21 ರಿಂದ ಸಂಜೆ 6:14ರವರೆಗೆ ಸಂಭವಿಸಲಿದೆ.
ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಈಶಾನ್ಯ ಅಮೆರಿಕ, ಕೆನಡಾದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.
ಏಷ್ಯಾ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ್ ಸಾಗರ, ಅಮೆರಿಕ, ಸೈಬೇರಿಯಾ, ರಷ್ಯಾ, ಗ್ರೀನ್ಲ್ಯಾಂಡ್, ವೆಸ್ಟರ್ಟ್ ಯುರೋಪ್ನಲ್ಲಿ ಗ್ರಹಣ ಗೋಚರ ಆಗಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳನ್ನು ಬಹಳ ವಿಶೇಷ ಘಟನೆಗಳೆಂದು ಪರಿಗಣಿಸಲಾಗುತ್ತದೆ.
ಈ ಅವಧಿಯಲ್ಲಿ ಆಹಾರ ಸೇವನೆಯಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಯುಗಾದಿಗೂ ಮೊದಲು ಸೂರ್ಯ ಗ್ರಹಣವಿರುವುದರಿಂದ ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆ. 30-50 ವರ್ಷಗಳ ಬಳಿಕ ಆರು ರಾಶಿಗಳು ಒಟ್ಟಿಗೆ ಒಂದೇ ಗ್ರಹದಲ್ಲಿ ಸಮ್ಮಿಲನವಾಗಲಿದ್ದು, ಇದು ಷಡ್ ಗ್ರಹಯೋಗ ಎಂದು ದಾರ್ಮಿಕ ಚಿಂತಕರು ವಿಶ್ಲೇಷಿಸಿದ್ದಾರೆ. ಈ ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹಬ್ಬದ ದಿನದಂದು (ಮಾರ್ಚ್ 14) ಬಂದಿತ್ತು.
ಇದನ್ನೂ ಓದಿ: ಮಯನ್ಮಾರ್ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿಕೆ..! 15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ ಭಾರತ
View this post on Instagram