ಕರಾವಳಿ

ಗೃಹ ಪ್ರವೇಶಕ್ಕೆ ಸಿದ್ಧವಾಗುತ್ತಿದ್ದ ಮನೆ ಮೇಲೆ ಬರೆ ಕುಸಿತ

613

ನ್ಯೂಸ್ ನಾಟೌಟ್: ಕಷ್ಟಪಟ್ಟು ನಿರ್ಮಿಸಿದ್ದ ಹೊಸ ಮನೆಗೆ ಇನ್ನೇನು ಹೋಗುವುದಕ್ಕೆ ಸಿದ್ಧವಾಗಿದ್ದ ಕುಟುಂಬದ ಕನಸೊಂದು ನುಚ್ಚು ನೂರಾಗಿದೆ. ಸತತ ಮಳೆಗೆ ಸಿಲುಕಿ ಬರೆ ಜರಿದು ಲಕ್ಷಾಂತರ ರೂ. ಸುರಿದು ನಿರ್ಮಿಸಿದ್ದ ಹೊಸ ಮನೆಗೆ ಭಾರಿ ಹಾನಿಯಾಗಿದೆ.

ತೊಡಿಕಾನ ಗ್ರಾಮದ ಕುಂಟುಕಾಡು ಬಳಿ ಪೆರಾಜೆಯ ದಾಮೋದರ ಅವರು ಖರೀದಿಸಿದ ಜಾಗದಲ್ಲಿ 2 ವರ್ಷಗಳಿಂದ ನೂತನ ಗೃಹ ನಿರ್ಮಾಣ ಮಾಡುತ್ತಿದ್ದರು. ಇನ್ನೆರಡು ತಿಂಗಳುಗಳಲ್ಲಿ ಮನೆಯ ಕೆಲಸ ಪೂರ್ತಿಗೊಳಿಸಿ ಮನೆಯ ಗೃಹ ಪ್ರವೇಶ ಮಾಡುವುದೆಂದು ನಿಶ್ಚಯಿಸಿದ್ದರು. ಆದರೆ ಇತೀಚಿನ ಬಾರಿ ಮಳೆಗೆ ಭೂಮಿ ಅದುರಿದಂತಾಗಿ ಮನೆಯ ಹಿಂದಿನ ಬರೆ ಸ್ವಲ್ಪ ಸ್ವಲ್ಪವೇ ಕುಸಿಯುತ್ತಾ ಅಪಾರ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಂ.ಪಂ ಅಧ್ಯಕ್ಷರು, ಸದಸ್ಯರು, ಪಿ.ಡಿ.ಓ, ಅರಂತೋಡು -ತೊಡಿಕಾನ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

See also  ದಬ್ಬಡ್ಕದಲ್ಲಿ ಜಲಸ್ಫೋಟ, ಭಾರಿ ನೀರು, ಜನ ಜೀವನ ತತ್ತರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget